ದೊಡ್ಡ ದೊಡ್ಡ ಮಂದಿ ಬಂದ್ ಮಠಾ ಉದ್ದಾರ್ ಮಾಡ್ತಾರನ್ಕೊಂಡಿದ್ದೆ: ಶ್ರೀ ದಿಂಗಾಲೇಶ್ವರ ಶ್ರೀಗಳು..
1 min readಹುಬ್ಬಳ್ಳಿ: ಮೂರುಸಾವಿರ ಮಠದಲ್ಲಿ ಉನ್ನತಮಟ್ಟದ ಸಮಿತಿಯಲ್ಲಿ ಪ್ರಮುಖರು ಬಂದಾಗ, ಮಠದ ಉದ್ದಾರ ಆಗತ್ತೆ ಎಂದುಕೊಂಡಿದ್ವಿ. ಆದರೆ, ಅದರಲ್ಲಿನ ಕೆಲವರು ಮಠದ ಆಸ್ತಿಯನ್ನ ಅವರಿಗೆ ಬೇಕಾದವರಿಗೆ ಮಾರಲು ಮುಂದಾದರು ಎಂದು ಮೂರುಸಾವಿರ ಮಠದ ಉತ್ತರಾಧಿಕಾರಿ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.
ಏನೇಲ್ಲಾ ಮಾತಾಡಿದ್ರು.. ನೀವೇ ಕೇಳಿ..!
ಹುಬ್ಬಳ್ಳಿ ತಾಲೂಕಿನ ಬೈರಿದೇವರಕೊಪ್ಪ ಗ್ರಾಮದಲ್ಲಿ ಮಠದ ಆಸ್ತಿ ಉಳಿಸಿ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸಿ ಸ್ವಾಮೀಜಿಗಳು ಮಾತನಾಡುತ್ತಿದ್ದರು.
ಸಚಿವ ಜಗದೀಶ ಶೆಟ್ಟರ, ವಿಜಯ ಸಂಕೇಶ್ವರ, ಮೋಹನ ಲಿಂಬಿಕಾಯಿ, ಬಸವರಾಜ ಹೊರಟ್ಟಿ, ಶಂಕರಣ್ಣ ಮುನವಳ್ಳಿ, ಬಸವರಾಜ ಬೊಮ್ಮಾಯಿ ಎಲ್ಲರೂ ಇದ್ದಿದ್ದರಿಂದ ಮಠಕ್ಕೆ ದೊಡ್ಡದೊಂದು ಅನುಕೂಲ ಆಗಲಿದೆ ಎಂದುಕೊಂಡಿದ್ದೆ. ಆದರೆ, ಅದು ಹಾಗಾಗಲಿಲ್ಲ.
ವಿಜಯ ಸಂಕೇಶ್ವರ ಅವರು ಸಮಿತಿಯಿಂದ ಹೊರಗೆ ಬಂದರು. ಇಲ್ಲಿನವರು ತಮಗೆ ಬೇಕಾದವರಿಗೆ ಆಸ್ತಿಯನ್ನ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಆರ್.ಟಿ.ಮಜ್ಜಗಿಯವರ ಅಳಿಯನಿಗೆ 2 ಎಕರೆ ಜಮೀನಿನನ್ನ 10 ಲಕ್ಷ ರೂಪಾಯಿಗೆ ಕೇಶ್ವಾಪುರದಲ್ಲಿನ ಆಸ್ತಿಯನ್ನ ಮಾರಾಟ ಮಾಡಿದ್ದಾರೆಂದು ಹೇಳಿದರು.