ಹಣಕ್ಕಾಗಿ ಪೀಡಿಸಿದವ ಮನೆ ಬಿಟ್ಟವ ಹೆಣವಾದ: ಹುಬ್ಬಳ್ಳಿಯ ಗೌತಮ ಶಾಲೆ ಹತ್ತಿರ ನಡೆದದ್ದೇನು..?

ಹುಬ್ಬಳ್ಳಿ: ಕುಡಿಯಲು ಹಣ ಕೇಳುತ್ತಿದ್ದ ಮಗನಿಗೆ ಹಣ ಕೊಡದೇ ಇದ್ದಾಗ ಗೆಳೆಯನೊಂದಿಗೆ ಹೊರಗಡೆ ಹೋದ ಮಗ ರಕ್ತಸಿಕ್ತವಾಗಿ ಸಿಕ್ಕು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನಿಗೆ ಸಾವಿಗೀಡಾಗಿದ್ದು, ಯುವಕನ ಕೊಲೆಯಾಗಿದೆ ಎಂದು ದೂರು ನೀಡಲಾಗಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾಪುರ ಓಣಿಯ ರಾಜೇಶ ಸ್ವಾಮಿರಾವ ಹುಟಗಿ ಎಂಬ ಯುವಕನೇ ಸಾವಿಗೀಡಾಗಿದ್ದು, ತಾಯಿ ಪದ್ಮಾವತಿ ಈ ಬಗ್ಗೆ ದೂರು ನೀಡಿದ್ದು, ತನ್ನ ಜೊತೆ ಜಗಳ ಮಾಡಿ ಹೋದ ಮಗ ಮತ್ತೆ ಮನೆಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
ತನ್ನ ತಾಯಿ ಪದ್ಮಾವತಿಗೆ ಕುಡಿಯಲು ಹಣ ಕೇಳಿದಾಗ ಹಣ ಕೊಡದೇ ಇದ್ದಾಗ. ಮೃತ ರಾಜೇಶ ತಾಯಿಯ ಮೇಲೆ ಹಲ್ಲೆ ಮಾಡಿದ. ಇದರಿಂದ ತಾಯಿ ಬಾಯಿ ಮಾಡಿದಾಗ, ಅಕ್ಕಪಕ್ಕದವರು ಜಮಾವಣೆ ಆಗಿದ್ದರು. ಆಗ ಅಲ್ಲಿಂದ ರಾಜೇಶ ಮನೆ ಬಿಟ್ಟು ಹೋಗಿದ್ದ.
ಕುಡಿದ ಮಗನನ್ನ ಹುಡುಕಲು ತಾಯಿ ಪದ್ಮಾವತಿ ಮತ್ತೆ ಹುಡುಕಾಟ ಆರಂಭಿಸಿದಾಗ ಗೌತಮ ಶಾಲೆಯ ಹತ್ತಿರ ರಕ್ತಸಿಕ್ತವಾಗಿ ಬಿದ್ದಿದ್ದ. ತಕ್ಷಣವೇ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ರಾಜೇಶ ಸಾವಿಗೀಡಾಗಿದ್ದಾನೆ. ಗಾಯಗೊಂಡಿದ್ದ ರಾಜೇಶನಿಗೆ ಹರಿತವಾದ ಆಯುಧದಿಂದ ಚುಚ್ಚಿರುವ ಕುರುಹುಗಳಿದ್ದು, ಹಳೇಹುಬ್ಬಳ್ಳಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.