ಕೊಲೆ ಮಾಡಿ ಪ್ರಾಣಿಗಳ ಪಾಲು ಮಾಡಿದ ನಾಲ್ವರ ಬಂಧನ: ಪಿಐ ಪ್ರಭುಗೌಡ ಗುಡ್ ವರ್ಕ್

ಉತ್ತರಕನ್ನಡ: ಮುಂಡಗೋಡ ತಾಲೂಕಿನ ಕಾತೂರ ಅರಣ್ಯ ಪ್ರದೇಶದಲ್ಲಿ ಕಳೆದ 7-8 ತಿಂಗಳ ಹಿಂದೆ ಕೊಲೆಯಾಗಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪಕ್ರಕರಣದ ರಹಸ್ಯವನ್ನ ಮುಂಡಗೋಡ ಪೊಲೀಸರು ಭೇದಿಸಿದ್ದು ನಾಲ್ಕು ಆರೋಪಿಗಳನ್ನ ಬಂಧಿಸಿದ್ದಾರೆ.
ಎಪ್ರಿಲ್ ತಿಂಗಳಿನಲ್ಲಿ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಅರಣ್ಯದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಬೇದಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿತ್ತು.
ಕೊಲೆಯಾದ ವ್ಯಕ್ತಿ ಹುಬ್ಬಳ್ಳಿಯ ನವನಗರದ ನಿವಾಸಿ ವರದರಾಜ ಶ್ರೀನಿವಾಸ ನಾಯಕ ಎಂಬುದು ತನಿಖೆಯಿಂದ ಹೊರ ಬಂದ ಬಳಿಕ ಆರೋಪಿಗಳಿಗಾಗಿ ಬಲೆ ಬಿಸಿದ ಪೊಲೀಸ್ರು ಪ್ರಮುಖ ಆರೋಪಿ ಅಭೀಷೇಕ ಶೇಟ ಆತನ ಸ್ನೇಹಿತರಾದ ಸುರೇಶ ಲಮಾಣಿ ಹಾಗೂ ರಾಮಕುಮಾರ ತಾಟಿಸಮ್ಲಾ ಇಬ್ಬರೂ ಉಣಕಲ್ ತಾಜನಗರ ಅವರನ್ನ ಬಂದಿಸಿದ್ದು ಆಸ್ತಿಯ ಸಂಬಂಧ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಕೊಲೆಯಾಗಿರುವ ವ್ಯಕ್ತಿಯನ್ನ ಪ್ರವಾಸಕ್ಕೆ ಹೋಗಿ ಬರುವುದಾಗಿ ಕರೆದುಕೊಂಡು ಬಂದು ಕೃತ್ಯ ನಡೆಸಿರುವುದಾಗಿ ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ಕೊಲೆಯಾದ ವ್ಯಕ್ತಿಯ ಶವದ ತುಂಡುಗಳು ಅರಣ್ಯದ ಹಲವು ಪ್ರದೇಶಗಳಲ್ಲಿ ಬಿದ್ದಿದ್ದವು. ಯಾವುದೇ ಗುರುತುಗಳು ಇರಲಿಲ್ಲ. ಆದರೂ, ಚಾಣಾಕ್ಷತನದಿಂದ ಮುಂಡಗೋಡ ಠಾಣೆಯ ಇನ್ಸಪೆಕ್ಟರ್ ಪ್ರಭುಗೌಡ ಪಾಟೀಲ, ತಮ್ಮ ಸಿಬ್ಬಂದಿಯೊಂದಿಗೆ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.