“ಮಲಗಿದಲ್ಲೇ ಮೊರಬದಲ್ಲಿ ಕತ್ತು ಸೀಳಿ ಹತ್ಯೆ”- ದಂಗು ಬಡಿದ ಗ್ರಾಮಸ್ಥರು…!!

ನವಲಗುಂದ: ಮನೆಯ ಮುಂದೆ ಮಲಗಿದ ವ್ಯಕ್ತಿಯ ಕತ್ತನ್ನ ಸೀಳಿ ಬರ್ಭರವಾಗಿ ಹತ್ಯೆ ಮಾಡಿರುವ ಪ್ರಕರಣ ತಾಲೂಕಿನ ಮೊರಬ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯನ್ನ ರಮೇಶ ಯರಗಣ್ಣನವರ ಎಂದು ಗುರುತಿಸಲಾಗಿದ್ದು, ಈತನ ಮಾವ ಲಿಂಬಣ್ಣ ಮೂಗನೂರ ಎಂದು ಹೇಳಲಾಗಿದ್ದು, ನಿರಂತರವಾಗಿ ಕೊಡುತ್ತಿದ್ದ ಕಿರುಕುಳದಿಂದ ಹತ್ಯೆ ಮಾಡಿದ್ದಾನೆಂದು ಹೇಳಲಾಗುತ್ತಿದೆ.
ಮನೆಯ ಮುಂದೆ ಮಲಗಿದ ಜಾಗದಲ್ಲಿಯೇ ಹರಿತವಾದ ಆಯುಧದಿಂದ ಕುತ್ತಿಗೆಯನ್ನ ಸೀಳಲಾಗಿದೆ. ಈ ಸಮಯದಲ್ಲಿ ಜೊತೆಗೆ ಯಾರಿದ್ದರೂ ಎಂಬುದನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ.
ಘಟನೆಯೂ ಗ್ರಾಮಸ್ಥರಲ್ಲಿ ಬೆಳ್ಳಂಬೆಳಿಗ್ಗೆ ದಂಗು ಬಡಿಸಿದೆ. ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸುತ್ತಿದ್ದಾರೆ.