ಹಣಕ್ಕಾಗಿ ರಸ್ತೆಯಲ್ಲೇ ಕೊಲೆ ಮಾಡಿದ ಪಾಪಿಗಳು: ಬೈಕ್ ನಲ್ಲಿ ಹೊರಟಾಗಲೇ ಕೊಲೆ

ಕಲಬುರಗಿ: ಹಣಕ್ಕಾಗಿ ವ್ಯಕ್ತಿಯೊರ್ವನನ್ನ ಕಲಬುರಗಿ ನಗರದ ರಿಂಗ್ ರಸ್ತೆ ಬಳಿ ಕೊಲೆ ಮಾಡಿ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಅಬ್ದುಲ್ ರಹೀಂ ಕೊಲೆಯಾದ ವ್ಯಕ್ತಿಯಾಗಿದ್ದು, ಬೈಕ್ ನಲ್ಲಿ ಹೊರಟಾಗ ದುಷ್ಕರ್ಮಿಗಳು ಆಗಮಿಸಿ ಕೊಲೆ ಮಾಡಿದ್ದಾರೆ. ಹಣಕಾಸಿನ ವಿಷಯಕ್ಕಾಗಿ ಸಂಬಂಧಿಕರಲ್ಲೇ ಹಲವು ಸಲ ಗದ್ದಲಗಳಾಗಿದ್ದವು, ಈಗ ಅವರೇ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಕೊಲೆ ಮಾಡಿದ ತಕ್ಷಣವೇ ಆರೋಪಿಗಳು ಪರಾರಿಯಾಗಿದ್ದು, ಎಷ್ಟು ಜನರಿಂದ ಕೊಲೆ ನಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ರೋಜಾ ಪೊಲೀಸ್ ಠಾಣೆಯ ಸಿಬ್ಬಂದಿಗಳು, ತನಿಖೆಯನ್ನ ಮುಂದುವರೆಸಿದ್ದಾರೆ.