ಗರಗ- “ಭಯಾನಕ ಹತ್ಯೆ”ಯ ಹಿಂದೆ ‘ತುಂಡ ಹೈಕ್ಳ’ ಕೈವಾಡ: ಕೆಲವೇ ಗಂಟೆಯಲ್ಲಿ ಸಿಕ್ಕಿಬಿದ್ದ ಕೊಲೆಪಾತಕರು..!!
ಧಾರವಾಡ: ತಾಲೂಕಿನ ಗರಗ ಗ್ರಾಮದ ಮನೆಯೊಂದರಲ್ಲಿ ಹಾಡುಹಗಲೇ ವ್ಯಕ್ತಿಯೋರ್ವನನ್ನ ಮನಬಂದಂತೆ ಕೊಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಗೊತ್ತಾಗಿದೆ.
ಗಿರೀಶ ಮಹದೇವಪ್ಪ ಕರಡಿಗುಡ್ಡ ಎಂಬ ವ್ಯಕ್ತಿಯನ್ನ ಮೊನ್ನೆ ಆತನ ಬಾಡಿಗೆ ಮನೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿದ್ದವರು ಕಡಿಮೆ ವಯಸ್ಸಿನ ಸ್ಥಳೀಯ ಗ್ರಾಮದವರೇ ಆಗಿದ್ದಾರೆ.
ಬಂಧಿತರಲ್ಲಿ ಮೂವರು ಕೇವಲ 18, 19 ವಯಸ್ಸಿನವರಾಗಿದ್ದು, ಇನ್ನೋರ್ವ 26ವಯಸ್ಸಿನವ ಎಂದು ಹೇಳಲಾಗುತ್ತಿದೆ. ಘಟನೆಗೆ ಅನೈತಿಕ ಸಂಬಂಧ ಕಾರಣ ಎಂಬ ಮಾತಿದೆ ಆದರೂ, ಅದು ಹತ್ಯೆಗೀಡಾದ ಗಿರೀಶನದ್ದಲ್ಲ ಎಂದು ಹೇಳಲಾಗುತ್ತಿದೆ.
ಗರಗ ಗ್ರಾಮದಲ್ಲಿ ಭಯಾನಕ ವಾತಾವರಣಕ್ಕೆ ಕಾರಣವಾಗಿದ್ದ ಪ್ರಕರಣವನ್ನ ಪೊಲೀಸರು ಬೇಧಿಸಿದ್ದು, ಇಲಾಖೆಯ ಕಾರ್ಯ ಕ್ಷಮತೆಯನ್ನ ತೋರಿಸುತ್ತಿದೆ.