ಹುಬ್ಬಳ್ಳಿ ಗೆಳೆಯರನ್ನ ಹತ್ಯೆ ಮಾಡಿದ ನಾಲ್ವರು ಹೆಂಗಿದ್ದಾರೆ ಗೊತ್ತಾ..? ಎಕ್ಸಕ್ಲೂಸಿವ್ ಪೋಟೊಗಳಿವೆ..
ಹುಬ್ಬಳ್ಳಿ: ಬುಧವಾರ ರಾತ್ರಿ ನಡೆದಿದ್ದ ಜೋಡಿ ಕೊಲೆಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಗೆಳೆಯನ ಧಿಮಾಕಿಗೆ ಗೆಳೆಯರನ್ನ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.
ನಿಯಾಜ ಜೋರಮ್ಮನವರ ಮತ್ತು ಈತನ ಗೆಳೆಯ ಮಂಜುನಾಥ ಕಬ್ಬಿನನ್ನ ನಾಲ್ವರು ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದರು. ಇದರಲ್ಲಿ ಪ್ರಮುಖವಾದ ಶ್ರೀನಿವಾಸ ಪರಶುರಾಮ ಹಿರೇಕುಂಬಿ ಅಲಿಯಾಸ್ ಸೀನು ನಿಯಾಜ್ ನೊಂದಿಗೆ ಜಗಳವಾಡಿಕೊಂಡಿದ್ದ. ಅದೇ ಕಾರಣಕ್ಕೆ ಗೆಳೆಯರೊಂದಿಗೆ ಬಂದು ಹತ್ಯೆ ಮಾಡಿದ್ದಾನೆ.
ಸೀನುಗೆ ಸಾಥ್ ನೀಡಿದ ಅವಿನಾಶ ನರಗುಂದ, ಸಂಜೀವ ವಡ್ಡರ ಮತ್ತು ಮಧು ಹಾದಿಮನಿ ಕೂಡಾ ಬಂಧನವಾಗಿದ್ದಾರೆ. ಕೊಲೆಯಾದವರು ಮತ್ತು ಕೊಲೆ ಮಾಡಿದವರು ಒಂದೇ ಪ್ರದೇಶದವರಾಗಿದ್ದು, ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.
ಕೇಶ್ವಾಪುರ ಠಾಣೆ ಇನ್ಸ್ ಪೆಕ್ಟರ್ ಸುರೇಶ ಕುಂಬಾರ, ಪಿಎಸೈ ಬಾಬಾ ಎಂ ಮತ್ತು ಸದಾಶಿವ ಕಾನಟ್ಟಿ ಸೇರಿದಂತೆ ಸಿಬ್ಬಂದಿಗಳಾದ ಎಂ.ಡಿ.ಕಾಲವಾಡ, ಎಚ್.ಎಂ.ಗುಳೇಶ, ವಿರುಪಾಕ್ಷಿ ಅಳಗವಾಡಿ, ಕೆಂದೂರ, ರಾಠೋಡ, ಭಜಂತ್ರಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.