ಕರ್ನಾಟಕವಾಯ್ಸ್.ಕಾಂ ಜೊತೆ ನರಹಂತಕನ ಮಾತು: ಬೆಳಗಾವಿಯಲ್ಲಿ ನಡೆದ ಹತ್ಯೆಯಲ್ಲೂ ಭಾಗಿ…!?

ಹುಬ್ಬಳ್ಳಿ: ನಗರದ ಶ್ರೀಕೃ ಷ್ಣಭವನದ ಮುಂಭಾಗದಲ್ಲಿ ದಾವಣಗೆರೆ ಮೂಲದ ಮಹಿಳೆಯನ್ನ ಕಲ್ಲಿನಿಂದ ಹತ್ಯೆ ಮಾಡಿ ಸಿಕ್ಕಿಬಿದ್ದಿರುವ ನರಹಂತಕ ರಫೀಕ, ತಾನೇಕೆ ಕೊಲೆಗಳನ್ನ ಮಾಡುತ್ತಿದ್ದೆ ಎಂದು ಕರ್ನಾಟಕವಾಯ್ಸ್.ಕಾಂ ಮುಂದೆ ಹೇಳಿಕೊಂಡಿದ್ದಾನೆ.
ಹುಬ್ಬಳ್ಳಿ ಶಹರದಲ್ಲಿಯೇ ಎರಡು ಕೊಲೆಗಳನ್ನ ಮಾಡಿರುವುದನ್ನ ಈಗಾಗಲೇ ಒಪ್ಪಿಕೊಂಡಿರುವ ಆರೋಪಿ ರಫೀಕ್, ಧಾರವಾಡದಲ್ಲಿಯೂ ಮಾಡಿರಬಹುದೆಂಬ ಶಂಕೆಯಿದ್ದು ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ.
ಕಿಮ್ಸನಲ್ಲಿ ವೈಧ್ಯಕೀಯ ತಪಾಸಣೆ ನಡೆಸುವ ವೇಳೆಯಲ್ಲಿ ನರಹಂತಕ ರಫೀಕ ಮಾತನಾಡಿದ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಆರೋಪಿ ರಫೀಕ, ಬೆಳಗಾವಿಯಲ್ಲೂ ಎರಡು ಹತ್ಯೆ ಮಾಡಿರುವ ಶಂಕೆಯಿದ್ದು, ಅದೇಲ್ಲವನ್ನೂ ಆತ ಚಿಲ್ಲರೇ ಕಾಸಿಗಾಗಿ ಮಾಡಿ, ಮರೆಯಾಗುತ್ತಿದ್ದ. ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರ ಕಾರ್ಯಕ್ಷಮತೆಯಿಂದ ನರಹಂತಕ ಸಿಕ್ಕಿಬಿದ್ದಿದ್ದು, ಹಲವು ಜೀವಗಳು ಉಳಿದಂತಾಗಿದೆ.