ನವದೆಹಲಿಯಲ್ಲಿ ಧಾರವಾಡ ಉತ್ತರ ಲೋಕಸಭಾ ಸದಸ್ಯರ ಯೋಗ

ನವದೆಹಲಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕೇಂದ್ರ ಸಚಿವ ಹಾಗೂ ಧಾರವಾಡ ಉತ್ತರ ಲೋಕಸಭೆಯ ಸಂಸದ ಪ್ರಲ್ಹಾದ ಜೋಶಿ ತಮ್ಮ ನಿವಾಸದಲ್ಲಿ ಯೋಗ ಮಾಡುವ ಮೂಲಕ ಆಚರಣೆ ಮಾಡಿದರು.
ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಯೋಗದ ವಿವಿಧ ಆಯಾಮಗಳನ್ನ ಮಾಡಿದರು. ಸಂಸದ ಪ್ರಲ್ಹಾದ ಜೋಶಿ ಮೊದಲಿಂದಲೂ ಯೋಗದ ಬಗ್ಗೆ ಆಸಕ್ತಿ ಹೊಂದಿದ್ದು, ಇದೇ ಕಾರಣಕ್ಕೆ ತಮ್ಮ ದೇಹವನ್ನ ಗಟ್ಟಿಯಾಗಿಸಿಕೊಂಡಿದ್ದಾರೆ. ಯೋಗ ಮನುಷ್ಯನ ಜೀವನಕ್ಕೆ ಅವಶ್ಯ ಎಂಬುದು ಅವರ ಹೇಳಿಕೆ.