ಮೋದಿ ರೂಲ್ಸ್ ಫಾಲೋ ಮಾಡದ ಲಿಂಗರಾಜ ಪಾಟೀಲ: ನೀವೇ ಹಿಂಗ್ ಮಾಡಿದ್ರ್ ಹೆಂಗ್ರೀ ಸರ್..
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ನೂರೆಂಟು ಬಾರಿ ಸುರಕ್ಷಿತ ಅಂತರ ಕಾಯ್ದುಕೊಳ್ಳಿ, ಭಾರತೀಯ ಸಂಸ್ಕೃತಿಯನ್ನ ಮೈಗೂಡಿಸಿಕೊಂಡು ಕೈ ಮುಗಿದು ಗೌರವ ಸೂಚಿಸಿ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಸಚಿವರು ಬಿಜೆಪಿ ಮುಖಂಡರು ಮಾಡುತ್ತಿರುವುದೇನು.. ಇಲ್ಲಿದೆ ನೋಡಿ ಪ್ರಧಾನಿಯ ಮಾತಿಗೂ ಬೆಲೆ ಕೊಡದ ಸ್ಥಿತಿಯ ವೀಡಿಯೋ..
ಹೌದು.. ಇವತ್ತು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಅರಬೈಲು ಶಿವರಾಮ ಹೆಬ್ಬಾರ್ ಹುಬ್ಬಳ್ಳಿಯ ಇ.ಎಸ್.ಐ ಆಸ್ಪತ್ರೆಗೆ ಭೇಟಿ ನೀಡಿದ್ರು. ಆಗ ಸಚಿವರನ್ನ ಸ್ವಾಗತಿಸಲು ಬಿಜೆಪಿಯಲ್ಲಿ ಅನೇಕ ಹುದ್ದೆಗಳನ್ನ ಅನುಭವಿಸಿರುವ ಲಿಂಗರಾಜ ಪಾಟೀಲರು ಬಂದು ಸಚಿವರನ್ನ ಸ್ವಾಗತ ಮಾಡಿದ್ರು.
ಸ್ವಾಗತವನ್ನ ಕೊರೋನಾ ಸಮಯದಲ್ಲಿ ಹೇಗೆ ಮಾಡಬೇಕೆಂದು ಗೊತ್ತಾಗದ ರೀತಿಯಲ್ಲಿ ಶಾಲು ಹೊದಿಸಿ, ಮಾಲೆ ಹಾಕಿ ಕೈಕುಲುಕುವ ಮೂಲಕ. ಇದು ಸರಿನಾ ಸಚಿವರೇ ಹಾಗೂ ಲಿಂಗರಾಜ ಪಾಟೀಲರೇ.
ಕೊರೋನಾ ಸಮಯದಲ್ಲಿ ಹಗಲಿರುಳು ಪ್ರಮುಖರು ಸುರಕ್ಷಿತರ ಅಂತರ ಕಾಪಾಡಿಕೊಳ್ಳಿ ಎಂದು ಹೇಳುತ್ತಾರೆ. ಆದ್ರೆ, ನೀವೇ ಹೀಗೆ ಮಾಡಿದ್ರೇ ಸಮಾಜ ಯಾವುದನ್ನ ಕೇಳಬೇಕು ಮತ್ತೂ ಯಾವುದನ್ನ ನಂಬಬೇಕು..
ಕೇವಲ ಎಸಿ ಕಾರಿನಲ್ಲಿ ಕೂತು ಕೊರೋನಾವನ್ನ ಹೊಡೆದೊಡಿಸಲು ಸಾಧ್ಯವಿಲ್ಲ ಎಂಬುದು ಸಚಿವರಿಗೂ ಗೊತ್ತಾಗಬೇಕು. ಪ್ರಧಾನಿ ಮೋದಿಯವರ ಮಾತಿಗೂ ಬೆಲೆಯಿಲ್ಲವೇ. ರಾಜ್ಯದ ಪ್ರಮುಖ ಸ್ಥಾನದಲ್ಲಿದ್ದವರೇ ಹೀಗೆ ನಡೆದುಕೊಂಡರೇ ಜನರು ನಿಮ್ಮ ಬಗ್ಗೆ ಏನಂದುಕೊಂಡಾರು ಎಂಬ ಕಲ್ಪನೆ ಇರಬೇಕಲ್ಲವೇ ಸಚಿವರೇ..
ಲಿಂಗರಾಜ ಪಾಟೀಲ ಅವರೇ, ನೀವು ಮಾಡಿದ್ದು ನಿಮಗೆ ಸರಿ ಅನಿಸಿದ್ರೇ ತೊಂದ್ರೇ ಇಲ್ಲ. ಆದ್ರೆ, ಪ್ರಧಾನಿಯವರಿಗಾದರೂ ಹೇಳಿ ಬಿಡಿ.. ನಾವೂ ಇರೋದೆ ಹೀಗೆ ಎಂದು.. ಅಲ್ವೇ..? ಹಿಂಗೇ ಕೇಳ್ತಾರೆ ಪ್ರಜ್ಞಾವಂತರು.