ಚಾಲಾಕಿ ಮೊಬೈಲ್ ಕಳ್ಳರನ್ನ ಹೆಡಮುರಿಗೆ ಕಟ್ಟಿರೋ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ: ವಿವಿಧ ಕಡೆಗಳಲ್ಲಿ ಸಾರ್ವಜನಿಕರನ್ನ ಯಾಮಾರಿಸಿ, ಅವರೊಂದಿಗೆ ಮಾತನಾಡುತ್ತಲೇ ಮೊಬೈಲ್ ಎಗರಿಸುತ್ತಿದ್ದ ಚಾಲಾಕಿ ಕಳ್ಳರನ್ನು ಹಿಡಿಯುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಲ್ಕು ಮೊಬೈಲ್ ಕಳ್ಳರನ್ನು ಬಂಧಿಸಿದ ಪೊಲೀಸರು ಅವರಿಂದ 1.42 ಲಕ್ಷ ಮೌಲ್ಯದ 20 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನ ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಮಾರುತಿ ಗೊಲ್ಲರ, ವಿನಾಯಕ ಕಬ್ಬಿನ, ಹೇಗ್ಗೆರಿಯ ರಾಹುಲ ಶಿವಳ್ಳಿ ಮತ್ತು ಟಿಪ್ಪು ನಗರದ ಜಾಕೀರ ತಾಳಿಕೋಟಿ ಎಂದು ಗುರುತಿಸಲಾಗಿದೆ.
ಗ್ರಾಮೀಣ ಪ್ರದೇಶದ ಬರುವ ಜನರಿಗೆ ಹಾಗೂ ಶಹರದಲ್ಲಿರುವ ಕೆಲವರನ್ನ ಮಾತನಾಡುತ್ತಲೇ ಮೊಬೈಲ್ ಎಗುರಿಸುತ್ತಿದ್ದ ಚಾಲಾಕಿ ಕಳ್ಳರನ್ನ, ಚಾಣಾಕ್ಷತನದಿಂದ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚು ಕಳ್ಳತನ ನಡೆಯುತ್ತಿದ್ದ ಪ್ರದೇಶದಲ್ಲಿ ನಿರಾಳತೆ ಕಂಡು ಬಂದ ಹಾಗಿದೆ.
ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸ್ ಇನ್ಸ್ಪೆಕ್ಟರ್ ರವಿಚಂದ್ರ,ಪಿಎಸ್ಐ ಸೀತಾರಾಮ, ವಾಲೀಕರ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.