Posts Slider

Karnataka Voice

Latest Kannada News

ಎಂಎಲ್ಸಿ ಚುನಾವಣೆ: 11500 ತೆಗೆದುಕೊಂಡ್ರೇ ಗೆಲುವು- ಚುನಾವಣೆ ಗಮ್ಮತ್ತು ಏನೇನಿದೆ ನೋಡಿ- ಅಂಕಿ,ಸಂಖ್ಯೆ ಸಮೇತ

1 min read
Spread the love

ಧಾರವಾಡ: ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಅಖಾಡಾ ರಂಗೇರುತ್ತಿದ್ದು, ಒಳ ಒಪ್ಪಂದಗಳು ಕೂಡಾ ನಡೆಯುತ್ತಲೇ ಇವೆ. ಗೆಲ್ಲಬೇಕು ಎಂದು ನಿಂತವರನ್ನ ಸೋಲಿಸಲು, ಸೋತೇ ಸೋಲುತ್ತಾರೆ ಎನ್ನುವವರನ್ನ ಗೆಲ್ಲಿಸಬೇಕೆಂಬ ಹುಮ್ಮಸ್ಸು ಚುನಾವಣೆ ಅಖಾಡಾದಲ್ಲಿ ಕಾಣತೊಡಗಿದೆ. ಇಂತಹದರಲ್ಲಿ ಇಡೀ ಚುನಾವಣೆಯ ಬಗ್ಗೆ ಚೂರು ವಿಶ್ಲೇಷಣೆ ನೋಡಬನ್ನಿ..

ನಿಮಗೆ ಅಚ್ಚರಿಯಾಗುವ ಒಂದಿಷ್ಟು ವಿಚಾರಗಳನ್ನ ಮೊದಲು ತಿಳಿದುಕೊಂಡು ಬಿಡಿ. ಕಳೆದ ಬಾರಿಯ ಚುನಾವಣೆಯಲ್ಲಿ ಒಟ್ಟು ಮತದಾರರರು ಸಂಖ್ಯೆ ಅರ್ಧದಷ್ಟು ಮಾತ್ರ ಈ ಬಾರಿ ಮತದಾರರಿದ್ದಾರೆ. ಈ ಬಾರಿ ಒಟ್ಟು 74268 ಮತದಾರರು ನಾಲ್ಕು ಜಿಲ್ಲೆಯಿಂದಲೂ ಇದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು 23593 ಮತದಾರರಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ 13148 ಮತದಾರರು ಇದ್ದಾರೆ. ಇನ್ನುಳಿದಂತೆ ಧಾರವಾಡ ಜಿಲ್ಲೆಯಲ್ಲಿ 21549, ಗದಗ ಜಿಲ್ಲೆಯಲ್ಲಿ 15978 ಮತದಾರರು ಇದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಡಾ.ಎಂ.ಆರ್.ಕುಬೇರಪ್ಪ, ಬಿಜೆಪಿಯಿಂದ ಕಳೆದ ಬಾರಿ ವಿಜೇತರಾದ ಎಸ್.ವಿ.ಸಂಕನೂರ ಚುನಾವಣೆಯನ್ನ ಎದುರಿಸುತ್ತಿದ್ದರೇ, ಇವರನ್ನ ಸೋಲಿಸಲು ಇನ್ನೊಂದು ಪಡೆ ಎದುರು ನೋಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಕಂಡು ಬರುತ್ತಿರುವುದು ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ.

ಈಗಾಗಲೇ ಕೆಲವೊಂದು ರಾಜಕೀಯ ತಂತ್ರಗಳು ಆರಂಭಗೊಂಡಿವೆ. ಹಾಲಿ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಪರವಾಗಿ ಮೊದಲಿನ ಥರವೇ ವಾತಾವರಣ ಇಲ್ಲವೇ ಇಲ್ಲ. ಹಾಗಂತ ಕಾಂಗ್ರೆಸ್ ನ ಡಾ.ಎಂ.ಆರ್.ಕುಬೇರಪ್ಪ ಫೇವರಿಟ್ ಅನ್ನುವ ಸ್ಥಿತಿಯೂ ಕಾಣುತ್ತಿಲ್ಲ. ಆದರೆ, ಇವರ ರೀತಿಯಲ್ಲಿ ನೋಡಿದಾಗ ಇವರೇ ಗೆಲ್ತಾರೆ, ಅವರ ರೀತಿಯಲ್ಲಿ ನೋಡಿದಾಗ ಅವರು ಗೆಲ್ಲಬಹುದು ಎನ್ನಿಸುತ್ತಿದೆ.

ಆದರೆ, ಈ ವರ್ಷದ ಜಿಲ್ಲಾವಾರು ಮತದಾರರ ಪಟ್ಟಿಯನ್ನ ನೋಡಿದಾಗ 10 ರಿಂದ 12000 ಮತಗಳನ್ನ ಪಡೆದವರು ಗೆಲುವುದು ನಿಶ್ಚಿತ ಎನಿಸುತ್ತದೆ. ಕಳೆದ ಬಾರಿ 22508 ಮತಗಳನ್ನ ಪಡೆದು ಗೆದ್ದಿದ್ದ ಎಸ್.ವಿ.ಸಂಕನೂರ ಇಂದು ಅದರ ಅರ್ಧದಷ್ಟು ಮತಗಳನ್ನ ಪಡೆಯಲು ಅಲೆದಾಟ ಆರಂಭಿಸಿದ್ದಾರೆ. ಜೆಡಿಎಸ್ ನ ಅಭ್ಯರ್ಥಿಯಾಗಿದ್ದ ಶಿವಶಂಕರ ಕಲ್ಲೂರ ಚುನಾವಣೆಯಿಂದ ಹಿಂದೆ ಸರಿದಿರುವುದು ಬಿಜೆಪಿಗೆ ಅನುಕೂಲವಾಗತ್ತೆ ಎಂಬ ಲೆಕ್ಕಾಚಾರವೂ ಇದೆ. ಏಕೆಂದರೇ, ಶಿವಶಂಕರ ಕಲ್ಲೂರ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ಸಮಯದಲ್ಲಿ ಬಿಜೆಪಿಗೆ ಬೆಂಬಲ ಕೊಡುತ್ತ ಬರುತ್ತಿರುವ ಕೆಲವು ಸಂಘಟನೆಗಳು ಕಲ್ಲೂರ ಬೆಂಬಲಕ್ಕೆ ನಿಂತಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ. ಏಕೆಂದರೇ, ಶಿವಶಂಕರ ಕಲ್ಲೂರಗೆ ಅನ್ಯಾಯವಾಯಿತು ಎಂದು ಬಿಜೆಪಿಗೆ ಬೆಂಬಲ ಕೊಡುತ್ತವೆ ಎಂದುಕೊಂಡು ಸಂಘಟನೆಳು ಬೇಸರಿಸಿಕೊಂಡಿದ್ದವು.

ಎಸ್.ವಿ.ಸಂಕನೂರ ಅವರಿಗೆ ಸ್ವ ಪಕ್ಷದವರು ಕೈ ಹಿಡಿದರೇ ಯಾವುದೇ ತೊಂದರೆಯಿಲ್ಲದೇ ಗೆಲುವು ಸಾಧಿಸುತ್ತಾರೆ, ಇಲ್ಲದಿದ್ದರೇ ಬಹಳ ಕಷ್ಟ ಎನ್ನಲಾಗುತ್ತಿದೆ. ಡಾ.ಕುಬೇರಪ್ಪ ಹಾವೇರಿಯಲ್ಲಿ ಪಡೆದ ಮತಗಳಷ್ಟೇ ಮೀಸಲಾಗದೇ ಇನ್ನುಳಿದ ಜಿಲ್ಲೆಯಲ್ಲೂ ಮತಗಳನ್ನ ಪಡೆದರೇ ಈ ಬಾರಿ ಕುಬೇರಪ್ಪ ಗೆಲುವನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಎರಡು ರಾಜಕೀಯ ಪಕ್ಷಗಳ ನಡುವಿರುವ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ, ರಾಷ್ಟ್ರೀಯ ಪಕ್ಷಗಳಲ್ಲಿನ ಅತೃಪ್ತರನ್ನ ಕೈಬೀಸಿ ಕೈ ಹಿಡಿದರೇ, ನಿರೀಕ್ಷೆಯೂ ಮಾಡದ ಬಸವರಾಜ ಗುರಿಕಾರ ಗೆಲುವು ಸಾಧ್ಯವಿದೆ ಎನ್ನುವ ಸ್ಥಿತಿಯಿದೆ.

ವಿಧಾನಪರಿಷತ್ ಚುನಾವಣೆಯ ಹಾವು-ಏಣಿಯಾಟಕ್ಕೆ ಮತದಾರ ಪ್ರಭು ಇನ್ನೂ ಮೂರೇ ದಿನದಲ್ಲಿ ತಮ್ಮ ಮುದ್ರೆಯನ್ನ ಒತ್ತಲಿದ್ದು, ಅವರಾ.. ಇವರಾ.. ಇವರಿಬ್ಬರನ್ನೂ ಬಿಟ್ಟು ಮತ್ತೋಬ್ಬರಾ.. ಗೊತ್ತಾಗತ್ತೆ.


Spread the love

Leave a Reply

Your email address will not be published. Required fields are marked *