ಶಾಸಕ ಮುನೇನಕೊಪ್ಪರಿಗೆ ಬಿಗ್ ಥ್ಯಾಂಕ್ಸ್ ಹೇಳಿದ ನೂತನ ಎಂಲ್ಸಿ ಸಂಕನೂರ

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ನೂತನ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ನಿವಾಸಕ್ಕೆ ಭೇಟಿ ನೀಡಿ, ಧನ್ಯವಾದ ಅರ್ಪಿಸಿದರು.
ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿರುವ ಎಸ್.ವಿ.ಸಂಕನೂರ, ತಮ್ಮ ಗೆಲುವಿನಲ್ಲಿ ಪರೋಕ್ಷವಾಗಿ ಸಹಕಾರ ಮಾಡಿದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಶಾಲು ಹೊದಿಸಿ, ಸತ್ಕರಿಸಿದ ಸಂಕನೂರ ಧನ್ಯವಾದ ಅರ್ಪಿಸಿದರು.
ಇದೇ ಸಮಯದಲ್ಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಕೂಡಾ, ಸಂಕನೂರ ಅವರಿಗೆ ಶಾಲು ಹಾಕಿ ಸತ್ಕರಿಸಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಎರಡನೇಯ ಬಾರಿ ಗೆಲುವು ಕಂಡಿರುವ ತಾವು, ಮುಂದಿನ ದಿನಗಳಲ್ಲಿ ಇನ್ನಷ್ಟು ಹುಮ್ಮಸ್ಸಿನಿಂದ ಪದವೀಧರ ಕೆಲಸ ಮಾಡುವಂತೆ ಕಾರ್ಯನಿರ್ವಹಿಸುವಂತೆ ಮುನೇನಕೊಪ್ಪ ಹೇಳಿದರು.
ಕೆಲಕಾಲ ಶಾಸಕ ಮುನೇನಕೊಪ್ಪ ಜೊತೆ ಮಾತನಾಡಿದ ನೂತನ ವಿಧಾನಪರಿಷತ್ ಸದಸ್ಯ ಸಂಕನೂರ, ಚುನಾವಣೆಯಲ್ಲಿ ನಡೆದ ಪ್ರಕ್ರಿಯೆಗಳನ್ನ ಹೇಳಿ. ಮತದಾರರ ಬಗ್ಗೆ ವಿಷಯಗಳನ್ನ ಸಮಾಲೋಚನೆ ಮಾಡಿದರು.