Posts Slider

Karnataka Voice

Latest Kannada News

ಕೊರೋನಾದಿಂದ ಸಚಿವ ಸಾವು: ಫಲಕಾರಿಯಾಗದ ಚಿಕಿತ್ಸೆ

1 min read
Spread the love

ಚೆನ್ನೈ: ಕೆಲವು ದಿನಗಳಿಂದ ಕೊರೋನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಸಚಿವರೋರ್ವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ರಾಜಕಾರಣಿಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ತಮಿಳುನಾಡು ರಾಜ್ಯದ ಕೃಷಿ ಸಚಿವ ಆರ್. ದೊರೈಕನ್ನು ಅವರು ಕೋವಿಡ್ ಸೋಂಕಿನಿಂದ  ಮೃತಪಟ್ಟಿದ್ದಾರೆ. ಈಗಾಗಲೇ ವಿವಿಧ ರಾಜ್ಯಗಳ ಹಲವು ಸಚಿವರು ಸೋಂಕಿಗೆ ಬಲಿಯಾಗಿದ್ದಾರೆ. ತಮಿಳುನಾಡು ಸಚಿವ ದೊರೈಕನ್ನು ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಡ ರಾತ್ರಿ ಕಾವೇರಿಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ದೊರೈಕನ್ನು ಅವರನ್ನು ಅಕ್ಟೋಬರ್ 13ರಂದು ಕಾವೇರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೊರೋನಾ ಜೊತೆಗೆ ಸಚಿವರು ನ್ಯುಮೋನಿಯಾ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದಲೂ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಡಾ.ಅರವಿಂದ ಸೆಲ್ವರಾಜ್ ತಿಳಿಸಿದ್ದಾರೆ.

ಪಾಪನಾಸಂ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಕೃಷಿ ಸಚಿವರು ಹಾಗೂ ಆರು ಮಕ್ಕಳನ್ನ ಅಗಲಿದ್ದಾರೆ. ಜಯಲಲಿತಾ ಮುಖ್ಯಮಂತ್ರಿ ಇದ್ದಾಗಲೂ ಇವರು ಸಚಿವರಾಗಿ ಕಾರ್ಯವನ್ನ ನಿರ್ವಹಿಸಿದ್ದರು.


Spread the love

Leave a Reply

Your email address will not be published. Required fields are marked *