Posts Slider

Karnataka Voice

Latest Kannada News

ಆನ್ ಲೈನ್ ಶಿಕ್ಷಣ- ಉಲ್ಲಂಘನೆಯಾದ್ರೇ ಕಾನೂನು ಕ್ರಮ: ಶಿಕ್ಷಣ ಸಚಿವ ಸುರೇಶಕುಮಾರ ಎಚ್ಚರಿಕೆ

1 min read
Spread the love

ಬೆಂಗಳೂರು: ಶಾಲೆಗಳು ಶಿಕ್ಷಣದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣದ ಕುರಿತು ತಜ್ಞರ ಸಮಿತಿಯ ಶಿಫಾರಸ್ಸಿನ ಅನ್ವಯ ಆನ್ ಲೈನ್ ತರಗತಿಗಳನ್ನ ನಡೆಸಬೇಕೆಂದು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ ತಿಳಿಸಿದ್ದಾರೆ.

ಕೋವಿಡ್-19 ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲೆಗಳನ್ನ ಇನ್ನೂ ತೆರೆಯಲು ಆಗಿಲ್ಲ. ಹೀಗಾಗಿ ಶಾಲೆಗಳು ಸರ್ಕಾರದ ಆನ್ ಲೈನ್ ಮಾರ್ಗಸೂಚಿ ಪಾಲಿಸದೇ ಹೆಚ್ಚಿನ ಅವಧಿಗಳನ್ನ ಪಡೆದು ತರಗತಿಗಳನ್ನು ನಡೆಸುತ್ತಿರುವುದು ಮಕ್ಕಳ ಆರೋಗ್ಯ ಮತ್ತು ದೃಷ್ಟಿಯ ಮೇಲೆ ಪರಿಣಾಮ ಉಂಟಾಗುತ್ತಿದೆ ವರದಿಗಳಾಗಿವೆ.

ಈ ಹಿನ್ನೆಲೆಯಲ್ಲಿ ತಜ್ಞರ ವರದಿಯ ಶಿಫಾರಸ್ಸಿನ ಅವಧಿ ಅನ್ವಯವೇ ಆನ್ ಲೈನ್ ಬೋಧನೆ ಮಾಡಬೇಕು. ಈ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಕ್ಷಣ ಕಾಯ್ದೆ 1983(1995) ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ತಜ್ಞರು ನೀಡಿದ ಆನ್ ಲೈನ್ ಬೋಧನಾ ತರಗತಿಗಳ ವಿವರ ಹೀಗಿದೆ..

ಪ್ರತಿ ಅಧಿವೇಶನದ ಗರಿಷ್ಠ ಪರದೆಯ ಸಮಯ- 30 ನಿಮಿಷಗಳು.

6 ಮತ್ತು ನಂತರದ ತರಗತಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ- 30 ರಿಂದ 45 ನಿಮಿಷಗಳು.

ವಯೋಮಾನಕ್ಕೆ ಅನುಗುಣವಾಗಿ ದಿನಕ್ಕೆ 1 ರಿಂದ 4 ಗರಿಷ್ಠ ಅಧಿವೇಶನಗಳು.

2ನೇ ತರಗತಿಯವರೆಗೆ ವಾರದಲ್ಲಿ ಪರ್ಯಾಯ ದಿನಗಳ ಬೋಧನೆ.

3ನೇ ತರಗತಿಯ ನಂತರ ವಾರಕ್ಕೆ 5 ದಿನಗಳವರೆಗೆ.

2ನೇ ತರಗತಿಯವರೆಗೆ ಪೋಷಕರ ಅಥವಾ ವಯಸ್ಕರ ಉಪಸ್ಥಿತಿ ಕಡ್ಡಾಯ.

ಇವುಗಳ ಜೊತೆಗೆ ನೇರ ಪ್ರಸಾರದ ಅಧಿವೇಶನಗಳು (ಸಿಂಕ್ರೋನಸ್) ಮತ್ತು ಪೂರ್ವ ಮುದ್ರಿತ ಅಧಿವೇಶಗಳನ್ನ (ಅಸಿಂಕ್ರೋನಸ್) ವಿಧಾನಗಳಿಗೆ ಅನುಮತಿಸಲಾಗಿದೆ ಎಂಬುದನ್ನೂ ಸಚಿವರು ಸ್ಪಷ್ಟಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed