ಕುಟುಂಬದ ನೋವಿನಲ್ಲೂ ಜನಸೇವೆಗೆ ನಿಂತ “ಸಚಿವ ಶಂಕರ ಪಾಟೀಲ ಮುನೇನಕೊಪ್ಪ”…
1 min readಬೆಂಗಳೂರು: ತಮ್ಮ ಕುಟುಂಬದಲ್ಲಿ ಸಾವುಗಳು ಸಂಭವಿಸಿದ್ದರೂ ಅದನ್ನೇಲ್ಲ ಎದೆಯಲ್ಲಿಟ್ಟುಕೊಂಡು ಸಮಾಜ ಸೇವೆಗೆ ಸಚಿವ ಶಂಕರ ಪಾಟೀಲ ಅವರು ಮುಂದಾಗಿದ್ದಾರೆ.
ನವಲಗುಂದ ಕ್ಷೇತ್ರದ ಶಾಸಕರು ಆಗಿರುವ ಕೈಮಗ್ಗ, ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಅವರು ಕುಟುಂಬದ ಹಲವರನ್ನ ಒಂದೂವರೆ ವರ್ಷದಲ್ಲಿ ಕಳೆದುಕೊಂಡಿದ್ದಾರೆ. ಆ ನೋವು ಅವರನ್ನ ನಿರಂತರವಾಗಿ ಕಾಡುತ್ತಿದೆ.
ಅಷ್ಟೇ ಅಲ್ಲ, ಕಳೆದ ವಾರದ ಹಿಂದೆ ಅವರ ಖಾಸಾ ಸಹೋದರ ಡಾ.ಮಲ್ಲನಗೌಡರು ತೀರಿಕೊಂಡರು. ಅದಕ್ಕಿಂತ ಒಂದು ತಿಂಗಳ ಹಿಂದೆ ಸಚಿವರ ಸಹೋದರನ ಮಡದಿ ಸಾವಿಗೀಡಾಗಿದ್ದರು. ಇದಕ್ಕಿಂತ ವರ್ಷದ ಹಿಂದೆ ಇನ್ನೋರ್ವ ಸಹೋದರ ಮತ್ತು ತಾಯಿ ಕೂಡಾ ನಿಧನರಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿಯೂ ಸಚಿವ ಮುನೇನಕೊಪ್ಪ ಅವರು, ಕರ್ತವ್ಯದ ಮೂಲಕ ಜನಸೇವೆಗೆ ನಿಂತಿದ್ದಾರೆ.
ಸಚಿವ ಶಂಕರ ಪಾಟೀಲ ಅವರ ಆತ್ಮಸ್ಥೈರ್ಯವನ್ನ ಪ್ರತಿಯೊಬ್ಬರು ಗೌರವಿಸಲೇಬೇಕು. ಅವರಲ್ಲಿನ ಜನಪರ ಕಾಳಜಿ ಎಂತಹದು ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
ಸರಕಾರ ಸಚಿವ ಮುನೇನಕೊಪ್ಪ ಅವರಿಗೆ ಬೀದರ ಹಾಗೂ ರಾಯಚೂರು ಜಿಲ್ಲೆಗಳ ಉಸ್ತುವಾರಿಯನ್ನು ನೀಡಿದ್ದು, ಎಲ್ಲ ಕಡೆಯೂ ಇಂತಹ ಸಂಕಷ್ಟದ ಸಮಯದಲ್ಲಿಯೂ ಜನರ ಕಾರ್ಯಗಳನ್ನ ನಿರ್ವಹಿಸುತ್ತಿದ್ದಾರೆ.