ಆಸ್ತಿಗಾಗಿ ಮೆಂಟಲ್ ಮಾಡಿ ಹಾಕಿದ್ದಾರಾ… ಧಾರವಾಡದ ಆಸ್ಪತ್ರೆ ಗಲಾಟೆಗೂ FIR ಗೂ ಲಿಂಕ್ ಇದೇಯಾ…. !

ಧಾರವಾಡ: ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಆಸ್ತಿಗಾಗಿ ಮಹಿಳೆಯನ್ನ ಮಾನಸಿಕ ಅಸ್ವಸ್ಥೆ ಮಾಡಿ ಕೂಡಿ ಹಾಕಲಾಗಿದೇಯಾ ಎಂಬ ಸಂಶಯಕ್ಕೆ ಉತ್ತರ ಹುಡುಕಲು ಹೋದವರೊಂದಿಗೆ ಸಹಾಯಕ ಪ್ರಾಧ್ಯಾಪಕರೋರ್ವರು ಗಲಾಟೆ ಮಾಡಿಕೊಂಡಿದ್ದು, ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.
ಬೆಂಗಳೂರಿನ ನರಸಿಂಹಮೂರ್ತಿ ಎನ್ನುವವರ ಸಂಬಂಧಿಯಾದ ಕಲೈ ಸೆಲ್ವೆ ಎಂಬ ಮಹಿಳೆಯನ್ನ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಿ, ಅದಾಗಲೇ 16 ತಿಂಗಳುಗಳು ಕಳೆದಿವೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಕೂಡಾ ನಡೆದಿದ್ದು, ಅದೇ ರೀತಿ ನ್ಯಾಯಾಲಯದಿಂದ ಅನುಮತಿ ಪಡೆದು ಭೇಟಿಯಾಗಲು ಬಂದರೂ, ಭೇಟಿಗೆ ಅವಕಾಶ ಕೊಡದ ಹಿನ್ನೆಲೆಯಲ್ಲಿ ಸಂಶಯ ಮತ್ತಷ್ಟು ಬಲವಾಗುತ್ತಿದೆ ಎನ್ನಲಾಗಿದೆ.
ಧಾರವಾಡದ ಡಿಮಾನ್ಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ನಾಯಕ ಅವರ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಕೀಲರಾದ ಸುಧಾ ಕಾಟವಾ ಅವರು ನ್ಯಾಯಾಲಯದ ಅನುಮತಿ ಪಡೆದು ಮಾನಸಿಕ ಆಸ್ಪತ್ರೆಯಲ್ಲಿರುವ ಮಾನಸಿಕ ಅಸ್ವಸ್ಥೆ ಕಲೈ ಸೆಲ್ವೆ ಅವರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಡಾ.ರಾಘವೇಂದ್ರ ನಾಯಕ ಅವರು ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂಬ ದೂರು ದಾಖಲಾಗಿದೆ.
ಡಾ.ರಾಘವೇಂದ್ರ ಅವರು ಸೆಕ್ಯುರಿಟಿ ಗಾರ್ಡ್ ಗಳನ್ನು ಕರೆದು ಸುಧಾ ಕಾಟವಾ ಅವರನ್ನು ಹೊರಗಡೆ ಹಾಕಿಸಿದ್ದಾರೆ. ಹೀಗಾಗಿ ಮಹಿಳೆಯರ ನಮ್ರತೆಗೆ ಧಕ್ಕೆ ತಂದ ಆರೋಪದಡಿ ಸುಧಾ ಕಾಟವಾ ಅವರು ಧಾರವಾಡದ ಉಪನಗರ ಠಾಣೆಯಲ್ಲಿ ಡಾ.ರಾಘವೇಂದ್ರ ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇವರ ಜೊತೆಗೆ ವಕೀಲರಾದ ರಾಜೇಶ್ವರಿ ಮತ್ತು ಉಮಾಪತಿ ಎನ್ನುವವರು ಕೂಡಾ ಇದ್ದರೆಂದು ಹೇಳಲಾಗಿದೆ.