ಲಾಕ್ ಡೌನ್ ಸಂಕಷ್ಟದಲ್ಲಿ ಮೆಕ್ಕೆ ಜೋಳ ಬೆಳೆಗಾರರು: ಕೈ ಹಿಡಿಯದ ಸರಕಾರ
1 min readಚಾಮರಾಜನಗರ: ಖರೀದಿದಾರರಿಲ್ಲದೆ ಸಾವಿರಾರು ಟನ್ ಮೆಕ್ಕೆಜೋಳ ಹುಳ ಉಪ್ಪಟ, ಹೆಗ್ಗಣಗಳ ಪಾಲಾಗುತ್ತಿದೆ. ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೆಕ್ಕೆ ಜೋಳ ಬೆಳೆಗಾರರು ಸಿಲುಕಿದ್ದಾರೆ.
1760 ರೂ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ತೆರೆಯುವ ಭರವಸೆಯನ್ನ ಮತ್ತು 4ಜಿ ವಿನಾಯಿತಿಯಡಿ ಕೆಎಂಎಫ್ ನಿಂದ ಮೆಕ್ಕೆಜೋಳ ಖರೀದಿ ಭರವಸೆಯನ್ನ ರಾಜ್ಯ ಸರ್ಕಾರ ನೀಡಿತ್ತು. ಗಡಿ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಸ್ಥಾಪನೆಗೆ ಸರ್ಕಾರದ ಮೀನಾಮೇಷ ಎಣಿಸುತ್ತಿದ್ದು ರೈತರು ಕಂಗಾಲಾಗಿದ್ದಾರೆ.
ಒಂದು ಸಾವಿರದೊಳಗೆ ಬೆಲೆ ನಿಗದಿ ಪಡಿಸಿ ಖರೀದಿಸಲು ಮದ್ಯವರ್ತಿಗಳು ಮುಂದಾಗಿದ್ದು, ಖರೀದಿ ಕೇಂದ್ರ ತೆರೆದು ರೈತನ ನೆರೆವಿಗೆ ದಾವಿಸುವಂತೆ ಮೆಕ್ಕೆಜೋಳ ಬೆಳೆಗಾರರು ಸರಕಾರವನ್ನ ಒತ್ತಾಯಿಸಿದ್ದಾರೆ.