ಅವಳಿನಗರದಲ್ಲಿ “40% ಪೇ ಮೇಯರ್”- ಟ್ವಿಟರ್ ಅಭಿಯಾನ…

ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಮಾಡಿದ ಕಾರ್ಯಕ್ರಮದ ಖರ್ಚಿನ ವಿಷಯವೀಗ ತೀವ್ರ ಚರ್ಚೆಗೆ ಒಳಗಾಗಿದ್ದು, ಈ ಬಗ್ಗೆ ಮೇಯರ ವಿರುದ್ ಟ್ವಿಟರ್ ಅಭಿಯಾನ ಆರಂಭಗೊಂಡಿದೆ.

ಈ ಬಗ್ಗೆ ಕಾಂಗ್ರೆಸ್ ಮುಖಂಡ ಟ್ವಿಟರ್‌ನಲ್ಲಿ ಬರೆದಿರುವುದು ಇಲ್ಲಿದೆ ನೋಡಿ..
Iresh Anchatgeri ರವರೇ ನಿಮ್ಮ ಲಂಚಾವತಾರವನ್ನು ಸಾರುವ #PayMayor ಪೋಸ್ಟರ್ ನೋಡಿ ಜನ ಛೀಮಾರಿ ಹಾಕುತ್ತಿದ್ದಾರೆ.
ರಾಷ್ಟ್ರಪತಿ ಶ್ರೀಮತಿ Draupadi Murmu ಅವರಿಗೆ ಪೌರ ಸನ್ಮಾನ ಹೆಸರಿನಲ್ಲಿ ಸುಮಾರು 1.5 ಕೋಟಿ ರೂ ದುಂದು ವೆಚ್ಚ ಮಾಡಿ ಪೆಂಡಾಲ್ ಹಾಕಿದ ಮೇಲೆ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ಲೆಕ್ಕಕೊಡಿ ಇಲ್ಲವೆ ರಾಜೀನಾಮೆ ನೀಡಿ.