ವೇತನದಿಂದ ಮಾಸ್ಕ್ ಖರೀದಿಸಿದ ಡಾ.ಮಯೂರೇಶ ಟೀಂ : ಶಹಬ್ಬಾಸ್ ಎಂದ ಎಸಿಪಿ ಅನುಷಾ ಮೇಡಂ
ಧಾರವಾಡ: ಕೋವಿಡ್-19 ಸಮಯದಲ್ಲಿ ರಜೆ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದ ಡಾ.ಮಯೂರೇಶ ತಮ್ಮ ವೇತನದ ಲಕ್ಷಾಂತರ ರೂಪಾಯಿ ಹಣದಿಂದ ಮಾಸ್ಕ್ ಖರೀದಿಸಿ, ಇಂದು ಧಾರವಾಡದ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಹಂಚಿದರು.
ವೀಡಿಯೋ ಇಲ್ಲಿದೆ ನೋಡಿ
ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದು ದಕ್ಷ ಅಧಿಕಾರಿ ಎಸಿಪಿ ಜೆ.ಅನುಷಾ. ನಗರದ ಪ್ರಮುಖ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಅಲೆಯುತ್ತಿದ್ದ ಜನರಿಗೆ ಮಾಸ್ಕಗಳನ್ನ ವಿತರಣೆ ಮಾಡಲಾಯಿತು. ಸುಭಾಸ ರಸ್ತೆ, ನೆಹರು ಮಾರುಕಟ್ಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಾಸ್ಕಗಳನ್ನ ವಿತರಣೆ ಮಾಡಲಾಯಿತು.
ಕಮಲಾಪುರದ ಡಾ. ಮಯೂರೇಶ ಹಾಗೂ ಸ್ನೇಹಿತರಾದ ಗಣೇಶ, ಪ್ರವೀಣಕುಮಾರ, ಕೃಷ್ಣಾ, ಶಿವಕುಮಾರ್, ಸಚಿನ್ನ, ಸಿದ್ಧಾರ್ಥ್, ಬಸವರಾಜ ಡಾ. ಅಭಿಷೇಕ ಅವರು ಜನರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿದರು.
ಎಸಿಪಿ ಅನುಷಾರವರು, ಸ್ವಯಂ ಪ್ರೇರಿತರಾಗಿ ಮಾಸ್ಕ್ ವಿತರಣೆ ಮಾಡುತ್ತಿರುವ ಗೆಳೆಯರನ್ನು ಕಂಡು ಖುಷಿ ಹಂಚಿಕೊಂಡರು. ಇನ್ನೂ ಭವಿಷ್ಯದಲ್ಲಿ ಜನರ ಪರವಾದ ನಿಮ್ಮ ಕೆಲಸ ಕಾರ್ಯಗಳು ಮುಂದುವರೆಯಲಿ ಎಂದು ಹಾರೈಸಿದರು.
ಧಾರವಾಡ ನಗರದ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದ ಜನರಿಗೆ ಮಾಸ್ಕ್ ವಿತರಣೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು, ವಿವಿಧ ಸರಕಾರಿ ಇಲಾಖೆಯ ಸಿಬ್ಬಂದಿಗಳಿಗೂ ಹಾಗೂ ಸಾರ್ವಜನಿಕರಿಗೆ ಒಟ್ಟು ಹತ್ತು ಸಾವಿರ ಮಾಸ್ಕ್ ಉಚಿತವಾಗಿ ನೀಡಲು ತಮ್ಮ ಸ್ನೇಹಿತರ ಜೊತೆ ಯೋಜನೆ ರೂಪಿಸಿದ್ದಾರೆ.