ರಾಯಚೂರು: ರಿಲಾಯನ್ಸ್ ಮಾರ್ಟಗೆ ಹೋಗ್ತಿದ್ದೀರಾ- ಸಧ್ಯ ಹೋಗಬೇಡಿ- ತೊಂದ್ರೇ ಅನುಭವಿಸ್ತೀರಾ..
ರಾಯಚೂರು: ಬಿಸಿಲು ನಾಡು ಎಂದೇ ಖ್ಯಾತಿ ಪಡೆದಿದ್ದ ಜಿಲ್ಲೆಯಲ್ಲಿ ನಿರಂತ ಮಳೆ ಸುರಿಯುತ್ತಿದ್ದು, ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಕಟ್ಟಡಗಳೀಗ ತೊಂದರೆಯನ್ನ ಅನುಭವಿಸುತ್ತಿವೆ.
ರಾಯಚೂರು ನಗರದ ಬಸವೇಶ್ವರ ವೃತ್ತದಲ್ಲಿರುವ ರಿಲಯನ್ಸ್ ಮಾರ್ಟ್ನಲ್ಲಿ ನೀರು ಒಳಗಡೆ ನುಗ್ಗಿದ್ದು, ವರಾಂಡವೆಲ್ಲ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಯಾವುದೇ ಗ್ರಾಹಕರು ಹೋಗದ ಸ್ಥಿತಿ ನಿರ್ಮಾಣವಾಗಿದೆ.
ಪ್ರಮುಖ ಸ್ಥಳದಲ್ಲಿಯೇ ಅವೈಜ್ಞಾನಿಕವಾಗಿ ಕಟ್ಟಡದ ನಿರ್ಮಾಣವಾಗಿರುವುದರಿಂದ ನೀರು ಒಳಗಡೆ ನುಗ್ಗಿದೆ. ಸಧ್ಯ ಅಲ್ಲಿದ್ದ ವಾಹನಗಳು ಕೂಡಾ ನೀರಿನಲ್ಲೇ ನಿಂತಿದ್ದು, ಒಳಗಿರುವ ನೀರನ್ನ ತೆಗೆಯುವ ಪ್ರಯತ್ನ ನಡೆಯುತ್ತಿದೆ.
ಗ್ರಾಹಕರು, ಈ ಮಾರ್ಟನ್ನ ನಂಬಿಕೊಂಡು ಅಲ್ಲಿಗೆ ಹೋಗುವುದನ್ನ ವಿಚಾರ ಮಾಡಿ ಹೋಗಿ, ಇಲ್ಲದಿದ್ದರೇ ನೀವೂ ಚೂರು ಸಮಸ್ಯೆಯನ್ನ ಎದುರಿಸಬೇಕಾಗತ್ತೆ.