ಕೆಲಗೇರಿ ಬಳಿ ಬೈಕಿನಲ್ಲಿ ಹೊರಟಿದ್ದ ಮಾರ್ಕೋಪೋಲೊ ಕಾರ್ಮಿಕನ ದುರ್ಮರಣ…!

ಧಾರವಾಡ: ನಗರದ ಕೆಲಗೇರಿ ಸೇತುವೆಯ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಮಾರ್ಕೋಪೋಲೊ ಕಂಪನಿಯ ಕಾರ್ಮಿಕನೋರ್ವ ಸಾವಿಗೀಡಾದ ದುರ್ಘಟನೆ ಇದೀಗ ನಡೆದಿದೆ.

ಕೆಲಗೇರಿ ಗ್ರಾಮದಿಂದ ಬರುತ್ತಿದ್ದ ದೇವೇಂದ್ರ ಸಿದ್ದಪ್ಪ ಕುರಕುಂದ ಎಂಬಾತನೇ ಸಾವಿಗೀಡಾಗಿದ್ದಾನೆ. ಕೆಲವರು ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೀಗಾಗಿದೆ ಎಂದರೇ, ಇನ್ನೂ ಕೆಲವರು ಬೈಕ್ ಸ್ಕಿಡ್ ಆಗಿದೆ ಎಂದು ಹೇಳುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.