ಮಾರಡಗಿಯಲ್ಲಿ ಯೋಧನ ಮನೆಯನ್ನೇ ಲೂಟಿ ಮಾಡಿದ ಕಳ್ಳರು
1 min readಧಾರವಾಡ: ಭಾರತೀಯ ಸೇನೆಯಲ್ಲಿದ್ದು ಯೋಧನ ಮನೆಯನ್ನೇ ಲೂಟಿ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮಾರಡಗಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಆರ್ಮಿಯಲ್ಲಿರುವ ಮಲ್ಲಿಕಾರ್ಜುನ ಮೆಟ್ಟಿನ ಎಂಬುವವರ ಮನೆಯೇ ಕಳ್ಳತನವಾಗಿದ್ದು, ಯೋಧನ ತಂದೆ ಶಿವಲಿಂಗಪ್ಪ ಹಾಗೂ ಯೋಧನ ತಾಯಿ ಮನೆಯಲ್ಲಿ ಮಲಗಿದಾಗಲೇ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಮಿಲ್ಟ್ರಿ ಬಾಕ್ಸಗಳನ್ನ ತೆರದು ಕಳ್ಳತನ ಮಾಡಿದ್ದು, ಸುಮಾರು ಮೂರು ತೊಲೆ ಬಂಗಾರ ಹಾಗೂ 24 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ.
ಮನೆಯ ಹಿತ್ತಲ ಬಾಗಿಲಿನಿಂದ ಬಂದಿರುವ ಕಳ್ಳರು, ಅಡುಗೆ ಮನೆಯ ಪಕ್ಕದಲ್ಲಿರುವ ಕೋಣೆಯೊಳಗಿನ ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮನೆಯಲ್ಲಿದ್ದವರಿಗೆ ಯಾವುದೇ ಶಬ್ಧ ಬರದ ಹಾಗೇ ನೋಡಿಕೊಂಡು ಕಳ್ಳತನ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಇನ್ಸಪೆಕ್ಟರ್ ಶ್ರೀಧರ ಸತಾರೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.