Posts Slider

Karnataka Voice

Latest Kannada News

ಪತ್ರಿ ಕೊಟ್ಟು ಗುಳಬುಟ್ಟಿಯಲ್ಲಿ ಕಾಳು ಪಡೆಯುತ್ತಲೇ- ಜಿಲ್ಲಾ ಪ್ರಶಸ್ತಿ ಪಡೆದ ಮಂಜುನಾಥ: ಥ್ಯಾಂಕ್ಯೂ ವಾಸುದೇವ ಹೆರಕಲ್ ಸರ್

Spread the love

ಡಾ.ಬಿ.ಎಫ್.ದಂಡಿನ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿಗೆ ಭಾಜನರಾಗಿರುವ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಪುಟವಿನ್ಯಾಸಕ ಮಂಜುನಾಥ ಹೂಗಾರ.

ವಿಷಯ: ಕರೋನಾ ಕಾರ್ಗತ್ತಲಿನಲ್ಲೂ ಬಡವರಿಗೆ ಬೆಳಕಾದ ದಿನಕರ

ಹುಬ್ಬಳ್ಳಿ: ಇಂದಿಗೂ ದಿನಬೆಳಗಾದರೇ ಸಾಕು ತಾವು ವಾಸವಿರುವ ಪ್ರದೇಶದ ಕೆಲವು ಭಾಗಗಳಲ್ಲಿ ಪೂಜೆಗೆ ಪತ್ರಿಯನ್ನ ಕೊಟ್ಟು, ನಂತರವೇ ಪತ್ರಿಕೆಯ ಕೆಲಸಕ್ಕೆ ಬರುತ್ತಿರುವ ಗೋಪನಕೊಪ್ಪ ಮಂಜುನಾಥ ಹೂಗಾರ ಅವರಿಗೆ ಡಾ.ಬಿ.ಎಫ್.ದಂಡಿನ್ ಅತ್ಯುತ್ತಮ ಪುಟವಿನ್ಯಾಸಕ ಪ್ರಶಸ್ತಿ ಲಭಿಸಿದೆ.

ಶಿವಾನಂದ ಹೂಗಾರ ಹಾಗೂ ಗೌರವ್ವರ ಪುತ್ರನಾಗಿರುವ ಮಂಜುನಾಥ ಅವರು ಧಾರವಾಡದ ಜೆಎಂಎಫ್ಸಿ ನ್ಯಾಯಾಲಯದ ಬಳಿ ಬೇರೆಯವರ ಹತ್ತಿರ ಟೈಪಿಂಗ್ ಮಾಡಲು ಹೋಗಿ ಜೀವನ ನಡೆಸುತ್ತಿದ್ದರು. ಅವರು ಕೊಡುತ್ತಿದ್ದ 20-30 ರೂಪಾಯಿಗಳೇ ದೊಡ್ಡದ್ದಾಗಿದ್ದವು. ಅದರ ಜೊತೆಗೆ ಮೊದಲಿಂದಲೂ ಜೀವನಕ್ಕೆ ಆಧಾರವಾಗಿದ್ದು ಪೂಜೆಗೆ ಪತ್ರಿ ಕೊಡುವುದು, ಅದು ಇವತ್ತಿಗೂ ನಿರಂತರವಾಗಿದೆ.

ಅಂದು ಟೈಪಿಂಗ್ ಮಾಡುತ್ತಿದ್ದವರ ಶಾಪ್ ಗಳು ಬಂದ್ ಆಗಿದ್ದರಿಂದ ಟೈಪಿಂಗನಿಂದಲೇ ಇಂದು ಸಂಜೆ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರ  ಕೆಲವರು ಸೇರಿಕೊಂಡು ಹಾವೇರಿಯಲ್ಲಿ ಪಾಂಡವ ಪತ್ರಿಕೆಯನ್ನ ಆರಂಭಿಸಿ, ಅಲ್ಲಾಗಲೇ ಹೆಸರು ಮಾಡಿದ್ದ ಇನ್ನೊಂದು ಪತ್ರಿಕೆಯನ್ನ ಮೀರಿಸುವಂತೆ ಡಿಸೈನಿಂಗ್ ಮಾಡಿ, ಅಲ್ಲಿಯೂ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದು ಇದೇ ಮಂಜುನಾಥರು.

ಹಾಗೇ ಮಾಡುತ್ತಿದ್ದಾಗಲೇ ಸ್ವಂತದೂರಿನಲ್ಲಿ ಕೆಲಸವಿದೆಯಂದು ಬಂದು ಸೇರಿಕೊಂಡಿದ್ದು, ಇದೇ ಸಂಯುಕ್ತ ಕರ್ನಾಟಕಕ್ಕೆ. 2011ರ ಜನೇವರಿಯಲ್ಲಿ ಕೆಲಸ ಸೇರಿ, ಬರೋಬ್ಬರಿ 10 ವರ್ಷಗಳು ಕಳೆಯುವ ಮುನ್ನವೇ ಜಿಲ್ಲಾ ಪ್ರಶಸ್ತಿಗೆ ಮಂಜುನಾಥ ಹೂಗಾರ ಆಯ್ಕೆಯಾಗಿದ್ದಾರೆ.

ಇದಕ್ಕೇಲ್ಲ ಕಾರಣವಾಗಿದ್ದು ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕರಾದ ವಾಸುದೇವ ಹೆರಕಲ್ ಅಂತಾರೆ ಮಂಜುನಾಥ ಹೂಗಾರ. ಕಚೇರಿಯಲ್ಲಿರುವ ಹುದ್ದಾರ, ಚಂದ್ರಶೇಖರ, ಸುಶೀಲೇಂದ್ರ ಕುಂದರಗಿ ಅವರು ನೀಡಿದ ಪ್ರೋತ್ಸಾಹದಿಂದಲೇ ಇವತ್ತು ಇಂತಹ ಪ್ರಶಸ್ತಿ ಲಭಿಸಿದೆ ಅನ್ನೋದು ಮಂಜುನಾಥ ಹೂಗಾರರ ಮಾತು.

ಸಧ್ಯ ಪಾಲಕರ ಜೊತೆ ಪತ್ನಿ ಸೌಭಾಗ್ಯ, ಮಕ್ಕಳಾದ ಸೋಹಂ ಮತ್ತು ಸಾಹಿತ್ಯರೊಂದಿಗೆ ಜೀವನ ನಡೆಸುತ್ತಿರುವ ಮಂಜುನಾಥ ಹೂಗಾರರಿಗೆ ಮತ್ತಷ್ಟು ಪ್ರಶಸ್ತಿಗಳು ಸಿಗುವ ಜೊತೆಗೆ ಜೀವನ ಇನ್ನಷ್ಟು ಸಂತಸವಾಗಿರಲಿ ಎಂದು ನಾವೂ ಕೂಡಾ ಬಯಸುತ್ತೇವೆ.


Spread the love

Leave a Reply

Your email address will not be published. Required fields are marked *