ನನ್ನ ಗೆಳತಿ... ನನ್ನ ಗೆಳತಿ… ಹಾಡಿನ ಸರದಾರ ಮಂಜುನಾಥ ಸಂಗಳದ ವಿಧಿವಶ…!!!

ಹುಬ್ಬಳ್ಳಿ: ಇಡೀ ರಾಜ್ಯವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲೂ ಸದ್ದು ಮಾಡಿದ್ದ ನನ್ನ ಗೆಳತಿ ಹಾಡಿನ ರಚನೆಕಾರ ಮತ್ತು ಹಾಡುಗಾರ ಮಂಜುನಾಥ ಸಂಗಳದ ಇಂದು ತಾರಿಹಾಳದಲ್ಲಿ ವಿಧಿವಶರಾದರು.
ಇಬ್ಬರು ಮಕ್ಕಳನ್ನ ಹೊಂದಿದ್ದ ಮಂಜುನಾಥ, ಉತ್ತರ ಕರ್ನಾಟಕದ ಅತ್ಯುತ್ತಮ ಹಾಡುಗಾರರಾಗಿ ಹೆಸರು ಪಡೆದಿದ್ದರು. ಕೆಲವು ದಿನಗಳ ಹಿಂದಷ್ಟೇ ಎಪಿಎಂಸಿ ಚುನಾವಣೆಯ ಸಂಬಂಧವಾಗಿ ಅವರಿವರನ್ನ ಭೇಟಿ ಕೂಡಾ ಮಾಡಿದ್ದರು.
ಮಂಜುನಾಥ ಸಂಗಳದ ಭಜನೆ ಹಾಡಿನ ಮೂಲಕ ಬೆಳಕಿಗೆ ಬಂದು ತದನಂತರ ಜಾನಪದ ಹಾಡುಗಾರರಾಗಿ ಹೊರಹೊಮ್ಮಿದ್ದರು. ನನ್ನ ಗೆಳತಿ ಅವರು ಬರೆದ ಹಾಡು ಕೋಟ್ಯಾಂತರ ಜನ ವೀಕ್ಷಣೆ ಮಾಡಿದ್ದರು.