ಮಣಕವಾಡದಲ್ಲಿ ಮಹಾನಾಯಕ ಫಲಕಕ್ಕೆ ಬ್ಲೇಡ್: ರಾತ್ರೋರಾತ್ರಿ ಪ್ರತಿಭಟನೆ
ಧಾರವಾಡ: ಡಾ.ಬಿ.ಆರ್.ಅಂಬೇಡ್ಕರ ಜೀವನ ಚರಿತ್ರೆಯ ಮಹಾನಾಯಕ ಭಾವಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಬ್ಲೇಡ್ ಹಾಕಿ ಗೊಂದಲ ಸೃಷ್ಟಿಸುವ ಕಾರ್ಯವನ್ನ ದುಷ್ಕರ್ಮಿಯೋರ್ವ ಮಾಡಿದ ಘಟನೆ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರಮುಖ ಬೀದಿಯಲ್ಲಿ ಹಾಕಿರುವ ಮಹಾನಾಅಯಕ ನಾಮಫಲಕವನ್ನ ಬ್ಲೇಡನಿಂದ ಹರಿದು ಹೋಗಿರುವ ಪ್ರಕರಣ ಗೊತ್ತಾದ ತಕ್ಷಣವೇ ಪ್ರತಿಭಟನೆಗೆ ದಲಿತ ಸಂಘರ್ಷ ಸಮಿತಿ ಮುಂದಾಗಿದ್ದು, ದುಷ್ಕರ್ಮಿಯನ್ನ ಬಂಧನ ಮಾಡುವಂತೆ ಆಗ್ರಹಿಸಿದ್ದಾರೆ.
ಗ್ರಾಮದಲ್ಲಿನ ವಾತವಾವರಣ ಹದಗೆಡಿಸುವ ಉದ್ದೇಶದಿಂದಲೇ ಯುವಕನೋರ್ವ ಇಂತಹ ಕುಕೃತ್ಯ ಮಾಡಿದ್ದಾನೆ. ಈ ಹಿಂದೆಯೂ ಗ್ರಾಮದಲ್ಲಿ ಹೀಗೆ ಮಾಡಿದ್ದನ್ನ ಪೊಲೀಸರೇ ಸರಿಪಡಿಸಿದ್ದರು. ಈ ಬಾರಿ ಆರೋಪಿಯನ್ನ ಬಂಧನ ಮಾಡಲೇಬೇಕೆಂದು ಧರಣಿನಿರತರು ಆಗ್ರಹಿಸಿದ್ದಾರೆ.
ತಡರಾತ್ರಿವರೆಗೂ ಪ್ರತಿಭಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಯುವಕನೋರ್ವ ನಾಮಫಲಕಕ್ಕೆ ಬ್ಲೇಡ್ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನ ಆಧರಿಸಿ ಬಂಧನ ಮಾಡುವ ಭರವಸೆಯನ್ನ ಪೊಲೀಸರು ನೀಡಿದ್ದಾರೆ.