ಹುಬ್ಬಳ್ಳಿಯಲ್ಲಿ “ಏಕ್ ಬಡಾ ಸಾ ಲವ್ ಸ್ಟೋರಿ”…. 50=18…!!!!

ಹುಬ್ಬಳ್ಳಿ: ನಮ್ಮ ಮಗಳು ಕಾಣೆಯಾಗಿದ್ದಾಳೆ 40 ದಿನದಿಂದ ನಮ್ಮ ಮಗಳು ಎಲ್ಲಿದ್ದಾಳೆ ಎಂಬ ಮಾಹಿತಿ ಇಲ್ಲ, ಮಗಳು ಮಿಸ್ಸಿಂಗ್ ಎಂಬ ಫೋಟೋ ಹಿಡಿದು ಪೋಷಕರು ಅಲೆದಾಡುವ ದೃಶ್ಯ ಹುಬ್ಬಳ್ಳಿಯಲ್ಲಿ ಕಂಡುಬಂದಿದೆ.
ವೀಡಿಯೋ.. ಇಲ್ಲಿದೆ ನೋಡಿ…
ಹೌದು.. ಹೀಗೆ ಫೋಟೋದಲ್ಲಿ ಕಾಣುತ್ತಿರುವ ಪೋಷಕರ ಹೆಸರು ದೀಪಕ್ ಹಾಗೂ ಶೀತಲ, ಇವರ ಮಗಳಾದ 18 ವರ್ಷದ ಕರಿಷ್ಮಾ ಕಾಣೆಯಾದ ಯುವತಿ. ಹುಬ್ಬಳ್ಳಿಯ ಚಾಲುಕ್ಯ ನಗರದ ವಾಸವಾಗಿದ್ದಾರೆ. ಕಳೆದ ಮೂರು ವರ್ಷದಿಂದ ಪ್ರಕಾಶ್ ಗೋಪಿ ಅನ್ನೋ 50 ವರ್ಷದ ವ್ಯಕ್ತಿಯ ಜೊತೆ ಕರಿಷ್ಮಾ ಸಲುಗೆಯಿಂದ ಇದ್ದಳಂತೆ. ಇದನ್ನೇ ಬಂಡವಾಳ ಮಾಡಿಕೊಂಡ ಪ್ರಕಾಶ್ ಆಕೆಯನ್ನು ಪುಸಲಾಯಿಸಿ ಹಣದ ಆಮಿಷವೊಡ್ಡಿ ಬಲವಂತದಿಂದ ತನ್ನ ವಶದಲ್ಲಿ ಇಟ್ಟುಕೊಂಡಿದ್ದಾನೆಂದು ಆಕೆಯ ಪೋಷಕರು ಆರೋಪ ಮಾಡಿದ್ದಾರೆ.
ಪ್ರಕಾಶಗೆ ಮದುವೆಯಾಗಿ ಈಗಾಗಲೇ ಇಬ್ಬರು ಮಕ್ಕಳು ಇದ್ದಾರೆ. ಆದರೇ ಈ ಅಸಾಮಿ ಅಂಕಲ್ ಕರಿಷ್ಮಾಳ ಬಡತನವನ್ನೆ ಬಂಡವಾಳವನ್ನಾಗಿಸಿಕೊಂಡು ಎರಡು ಮೂರು ವರ್ಷಗಳ ಹಿಂದೆ ಆಕೆಯ ಹಿಂದೆ ಬಿದ್ದಿದ್ದ ಈ ವಿಚಾರವಾಗಿಯೇ ಕಳೆದ ವರ್ಷ ಪ್ರಕಾಶ್ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಕರಿಷ್ಮಾಳನ್ನು ಇತ್ತೀಚೆಗೆ ತನ್ನ ಅಜ್ಜಿಯ ಮನೆ ಮಹಾರಾಷ್ಟ್ರದಲ್ಲಿ ವಾಸವಾಗಿದ್ದಳು. ಜನವರಿ 3 ರಂದು ಅಜ್ಜಿ ಮನೆಯಿಂದ ಕರಿಷ್ಮಾ ಕಾಣೆಯಾಗಿದ್ದು, ಇದೀಗ ಅಲ್ಲಿಂದಲೇ ಅಂಕಲ್ ಜೊತೆಗೆ ಪರಾರಿಯಾಗಿರುವ ಆರೋಪವನ್ನು ಕರಿಷ್ಮಾ ಪಾಲಕರು ಮಾಡಿದ್ದಾರೆ.
ಕಳೆದ ಸುಮಾರು 40 ದಿನವಾದರೂ ಕೂಡಾ ಕರಿಷ್ಮಾ ಸುಳಿವು ಸಿಕ್ಕಿಲ್ಲ. ಮಗಳ ಬಗ್ಗೆ ಯಾವುದೇ ಮಾಹಿತಿ ಸಿಗದೆ ಪಾಲಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದು. ಸದ್ಯ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.