ಮದುವೆ, ‘ಮತ್ತೆ ಪ್ರೀತಿ’… ಟ್ರ್ಯಾಕ್ಟರಗೆ ಕಟ್ಟಿಸಿಕೊಂಡ ಪ್ರೇಮಿ.. ಬೇರೆಯವರ ಹೆಂಡತಿ…!

ಬೆಳಗಾವಿ: ಇದು ಯಾವುದೋ ಸಿನೇಮಾವನ್ನ ನೆನಪಿಸೋ ಘಟನೆ. ಇಲ್ಲಿ ಪ್ರೇಮಿ ಪ್ರೇಮಿಯಾಗಿಯೇ ಮುಂದುವರೆಯುತ್ತಾನೆ. ಆದರೆ, ಪ್ರಿಯತಮೆ ಬೇರೋಬ್ಬರ ಮಡದಿಯಾಗಿರ್ತಾಳೆ. ಆದರೂ, ಪ್ರೀತಿ.. ಪ್ರೇಮ.. ಪ್ರಣಯ.. ಗಂಡನ ಮನೆಯವರು ಸುಮ್ಮನೆ ಕೂಡ್ತಾರಾ.. ಆಗಿದ್ದೇನು ಎಂಬುದನ್ನ ಈ ವೀಡಿಯೋವನ್ನ ನೋಡಿ..
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುರಕಟನಾಳ ಗ್ರಾಮದ ವಿವಾಹಿತೆ ತನ್ನ ಪ್ರಿಯಕರನೊಂದಿಗೆ ಸಿಕ್ಕಿ ಹಾಕಿಕೊಂಡಿದ್ದಾಳೆ. ಪ್ರಿಯಕರನ ಜೊತೆ ಸಲ್ಲಾಪ ಶುರು ಮಾಡುವವರೆಗೂ ಕಾಯ್ದ ಮನೆಯವರು, ಸಲ್ಲಾಪ ಶುರುವಾಗಿದ್ದೆ ತಡ, ಹಗ್ಗದಿಂದ ಇಬ್ಬರನ್ನೂ ಟ್ರ್ಯಾಕರಗೆ ಕಟ್ಟಿದ್ದಾರೆ.
ವಿವಾಹಿತೆ ಮಹಿಳೆ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಭೀಮಸಿ ಜೆಟ್ಟೆನ್ನವರ ಜೊತೆ ಸರಸದಲ್ಲಿ ತೊಡಗಿದಾಗ, ಗಂಡನ ಮನೆಯವರು ರೆಡ್ ಹ್ಯಾಂಡಾಗಿ ಹಿಡಿದು, ಕಟ್ಟಿದ್ದಾರೆ. ಸುಮಾರು ನಾಲ್ಕು ಗಂಟೆಯವರೆಗೆ ಇಬ್ಬರನ್ನೂ ಕಟ್ಟಿ, ತಮ್ಮ ಸಿಟ್ಟನ್ನ ಕಡಿಮೆ ಮಾಡಿಕೊಂಡಿದ್ದಾರೆ.
ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿವಾಹಿತೆ ಮಹಿಳೆ ಗಂಡನೆದುರೇ, ಪ್ರಿಯಕರನ ಜೊತೆ ಹಗ್ಗ ಕಟ್ಟಿಸಿಕೊಳ್ಳಬೇಕಾದ ಪ್ರಸಂಗ ಮಾತ್ರ ಎಲ್ಲೂ ಕಾಣ ಸಿಗದು.