ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹೋರಾಟ
ಧಾರವಾಡ: ವೀರಶೈವ ಲಿoಗಾಯತ ಒಕ್ಕೂಟ ಧಾರವಾಡ ಜಿಲ್ಲಾ ಘಟಕ ವತಿಯಿಂದ ವೀರಶೈವ ಲಿoಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ 200 ಕೋಟಿ ಹಣ ಮೀಸಲಿಡುವಂತೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಪ್ರತಿಭಟನೆ ಮಾಡಿ, ತಹಶೀಲ್ದಾರರಿಗೆ ಮನವಿ ನೀಡಲಾಯಿತು.
ವೀರಶೈವ ಲಿಂಗಾಯತ ಸಮಾಜದ ಏಳಿಗೆಯಾಗಲು ನಿಗಮದ ಸ್ಥಾಪನೆ ಅತ್ಯವಶ್ಯವಾಗಿದೆ. ಇದನ್ನ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿಕೊಡಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಬಿ.ಡಿ.ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಶರಣಪ್ಪ ಕೂಟಗಿ, ಶಿವಪೂಜಯ್ಯ ತಡಸಮಠ, ಯಲ್ಲಪ್ಪ ಚವರಗಿ, ಚನ್ನಯ್ಯ ಹಿರೇಮಠ, ಚೆನ್ನಪ್ಪ ಹೊನ್ನಳ್ಳಿ, ಶಿವಾನಂದ ಹಿರೇಮಠ, ಸುಮಾ ಗಂಜಿಗಟ್ಟಿ, ಮಂಜುಳಾ ರೇವಣ್ಣವರ ಪರಮೇಶ್ವರ ಕಮ್ಮಾರ, ನಿಜಗುಣಿ ಕೆಲಗೇರಿ, ಉಳವಪ್ಪಾ ಬೆಳೆಗೇರ, ಬಸವರಾಜ ಬಡಿಗೇರ, ಶೇಖಪ್ಪ ಬೆಲ್ಲದ ಸೇರಿದಂತೆ ವೀರಶೈವ ಲಿoಗಾಯತ ಸಮಾಜದ ಎಲ್ಲ ಒಳ ಪಂಗಡಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.