Posts Slider

Karnataka Voice

Latest Kannada News

ಗಂಡಸರು ಈ ರಥವನ್ನ ಮುಟ್ಟೋದೆ ಇಲ್ಲಾ… ಇಂತಹ ವಿಶೇಷ ನಡೆಯೋದು ಎಲ್ಲಿ ಗೊತ್ತಾ…?

1 min read
Spread the love

ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ವಿಶೇಷವಾದ ರಥೋತ್ಸವ ನಡೆದಿದ್ದು, ಈ ರಥೋತ್ಸವದಲ್ಲಿ ಮಹಿಳೆಯರೇ ಭಾಗವಹಿಸಿ ತೇರನ್ನ ಎಳೆಯುವುದು ವಿಶೇಷ.

ರಥೋತ್ಸವದಲ್ಲಿ ಪುರುಷರನ್ನು ದೂರವಿಟ್ಟು ಮಹಿಳೆಯರು ಮಾತ್ರ ರಥೋತ್ಸವದಲ್ಲಿ ಭಾಗವಹಿಸುತ್ತಾರೆ.
ಭ್ರಮರಾಂಬಾ ದೇವಿ ಪುರಾಣ ಮುಕ್ತಾಯದ ನಿಮಿತ್ತ ಮಸ್ಕಿಯಲ್ಲಿ ಭ್ರಮರಾಂಬಾ ದೇವಿಯ ರಥೋತ್ಸವ ನಡೆಯುತ್ತದೆ.
ಭ್ರಮರಾಂಬಾ ದೇವಿಯ ಉತ್ಸವ ಮೂರ್ತಿಯನ್ನು ಐದು ಸುತ್ತು ರಥದ ಪ್ರದಕ್ಷಿಣೆ ಮಾಡಿದ ನಂತರ ರಥದ ಮೇಲೆ ಭಕ್ತರ ಜಯಘೋಷಗಳ ನಡುವೆ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗತ್ತೆ.
ರಥಕ್ಕೆ ಪೂಜೆ ಸಲ್ಲಿಸಿದ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ‌ ನೀಡಿದರು. ಮಹಿಳೆಯರು ರಥ‌‌ ಮಿಣಿ ಹಿಡಿದು ರಥ ಎಳೆದರು. ಕೊರೋನಾ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟು ದೂರ ರಥ ಎಳೆದು ವಾಪಾಸು ತಂದರು. ಭಕ್ತರು ಭ್ರಮರಾಂಬಾ ದೇವಿಗೆ ಜಯಘೋಷ ಹಾಕಿ ಭಕ್ತಿ ಸಮರ್ಪಿಸಿದರು.
ದೇವಿ ಪುರಾಣ ಮುಕ್ತಾಯ ಹಿನ್ನೆಲೆಯಲ್ಲಿ ಸರಳವಾಗಿ ರಥೋತ್ಸವ ನಡೆಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮುಖಂಡರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


Spread the love

Leave a Reply

Your email address will not be published. Required fields are marked *