ನೆಲದ ಮೇಲೆ ಮಲಗಿದ್ದಾರೆ ಕ್ವಾರಂಟೈನ್ ಜನ: ಜಿಲ್ಲಾಡಳಿತದ ನಿರ್ಲಕ್ಷ್ಯ

ಕೋಲಾರ: ಕೋಲಾರದ ಕ್ವಾರೆಂಟೈನ್ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ಕೊಠಡಿಯೊಂದರಲ್ಲಿ ನಾಲ್ಕು ಜನರನ್ನು ಕ್ವಾರಂಟೈನ್ ಮಾಡಿದ್ದರೂ ಕನಿಷ್ಟ ಸೌಲಭ್ಯಗಳನ್ನು ನೀಡದಿರುವ ಪ್ರಸಂಗ ಕೋಲಾರದ ಕೆಜಿಎಫ್ ತಾಲೂಕಿನ ಶಾಲೆಯೊಂದರಲ್ಲಿ ನಡೆಯುತ್ತಿದೆ.
ಬೇರೆ ಜಿಲ್ಲೆಗಳಿಂದ ಬಂದಿರುವ ನಾಲ್ಕು ಜನರನ್ನು ಕ್ವಾರಂಟೈನ್ ಮಾಡಿರುವ ಆರೋಗ್ಯ ಇಲಾಖೆ. ಬೆಡ್ ಹೊದಿಕೆ, ಕನಿಷ್ಟ ಪಕ್ಷ ಚಾಪೆ ತಲೆದಿಂಬು ನೀಡದೆ ನಿರ್ಲಕ್ಷ್ಯ. ವ್ಯಕ್ತಿಗಳು ನೆಲದ ಮೇಲೆ ಮಲಗಿರುವ ವಿಡಿಯೋ ಪುಲ್ ವೈರಲ್. ಕುಡಿಯುವ ನೀರು, ಆಹಾರ ಪೂರೈಕೆ ವ್ಯವಸ್ತೆಯಲ್ಲೂ ಲೋಪವಾಗಿದೆ ಎಂದು ದೂರಲಾಗಿದೆ.