ಕುಂದಗೋಳ “ತಾಪಂ” ಕಚೇರಿಯಲ್ಲಿ ಹೊತ್ತಿ ಉರಿದ ಬೈಕ್…
1 min read
ಕುಂದಗೋಳ: ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವನ ಬೈಕಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿರುವ ಘಟನೆ ಪಟ್ಟಣದಲ್ಲಿನ ತಾಲೂಕು ಪಂಚಾಯತಿ ಕಚೇರಿಯಲ್ಲಿ ಸಂಭವಿಸಿದೆ.
ಮನೋಜ ಎಂಬ ಡಿ ದರ್ಜೆಯ ನೌಕರನ ಬೈಕ್ ಸುಟ್ಟಿದೆ. ಘಟನೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಜರುಗಿಸಿದ್ದಾರೆ.