ಕುಂಭಮೇಳ ಐದು ದಿನದಲ್ಲಿ 1701 ಕೋವಿಡ್ ಪ್ರಕರಣ ಪತ್ತೆ…!

ಉತ್ತರ ಪ್ರದೇಶ: ಹರಿದ್ವಾರ ಕುಂಭಮೇಳದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಒಟ್ಟು 1,701 ಕೋವಿಡ್ -19 ಪ್ರಕರಣಗಳು ಕಂಡು ಬಂದಿವೆ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳದಲ್ಲಿ. ಈ ಮೇಳದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದಾರೆ. ಸಧ್ಯ ಇದು ಕೊರೋನ ಪ್ರಕರಣಗಳ ತ್ವರಿತ ಏರಿಕೆಗೆ ಮತ್ತಷ್ಟು ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಕಳೆದು ಐದು ದಿನಗಳಲ್ಲಿ ಹರಿದ್ವಾರದಿಂದ ದೇವ್‌ಪ್ರಯಾಗ್‌ವರೆಗೆ ಕುಂಭ ಮೇಳ ವಿಸ್ತರಿಸಿದೆ ಅದಕ್ಕಾಗಿ ನಾವು ಆರ್‌ಟಿ-ಪಿಸಿಆರ್ ಮತ್ತು RAPID ಆಂಟಿಜೆನ್ ಟೆಸ್ಟ್ ವರದಿಗಳನ್ನ ಮಾಡುತ್ತಿದ್ದೇವೆ ಎಂದು ಹರಿದ್ವಾರ ಮುಖ್ಯ ವೈದ್ಯಕೀಯ ಅಧಿಕಾರಿ ಶಂಭುಕುಮಾರ್ ತಿಳಿಸಿದ್ದಾರೆ.
ಇನ್ನು ಹೆಚ್ಚಿನ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಗಳಿಗಾಗಿ ಕಾಯುತ್ತಿದ್ದೇವೆ ಮತ್ತು ಕುಂಭಮೇಳ ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆ 2,000 ಕ್ಕೆ ಏರುವ ಸಾಧ್ಯತೆಯಿದೆ ಎಂದು ಆತಂಕವ್ಯಕ್ತಪಡಿಸಿದ್ದಾರೆ.
ಹರಿದ್ವಾರದಲ್ಲಿನ ಈ ಕುಂಭಮೇಳವು ಒಟ್ಟು 670 ಹೆಕ್ಟೇರ್ ಪ್ರದೇಶ ಹೊಂದಿದೆ. ಅಲ್ಲದೆ, ಡೆಹ್ರಾಡೂನ್ ಜಿಲ್ಲೆ ಟೆಹ್ರಿ ಮತ್ತು ವೃಷಿಕೇಶ ಪ್ರದೇಶಗಲ್ಲಿ ಕೂಡ ವ್ಯಾಪಿಸಿದೆ. ಏಪ್ರಿಲ್ 12 ರಂದು ಸೋಮವತಿ ಅಮಾವಾಸ್ಯ ಮತ್ತು ಏಪ್ರಿಲ್ 14 ರಂದು ನಡೆದ ಮೆಶ ಸಂಕ್ರಾಂತಿಯ ಸಂದರ್ಭದಲ್ಲಿ ನಡೆದ ಕೊನೆಯ ಎರಡು ಪುಣ್ಯ ಸ್ನಾನದಲ್ಲಿ ಒಟ್ಟು 48.51 ಲಕ್ಷ ಜನ ಭಾಗವಹಿಸಿದ್ದಾರೆ. ಬಹುಪಾಲು ಜನರು ಮಾಸ್ಕ್ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ ಹೀಗಾಗಿ ಇವರೆಲ್ಲ ಕೋವಿಡ್ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ.
13 ಅಖಾರರು ಸೂರ್ಯಾಸ್ತದ ಮೊದಲು ನಿಗದಿಪಡಿಸಿದ ಸಮಯದ ಸ್ಲಾಟ್‌ಗಳಿಗೆ ಅನುಗುಣವಾಗಿ ಹರ್ ಕಿ ಪೈರಿಯಲ್ಲಿ ಪುಣ್ಯ ಸ್ನಾನ ಮಾಡಬೇಕಾಗಿರುವುದರಿಂದ ಸಾಲಿನಲ್ಲಿ ಬರುವ ಮೊದಲು ಅಲ್ಲಿ ಜಾಗ ಕಾಲಿ ಇದೆಯಾ ಇಲ್ಲವೆ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನ ನೇಮಿಸಲಾಗಿತ್ತು. ಹೆಚ್ಚಿನ ಜನ ಸೇರಿದ ಕಾರಣ ಜನರಿಂದ ನೂಕುನುಗ್ಗಲು ಶುರುವಾಯಿತು. ಇದರಿಂದ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿ ದೂರ ಸರಿದ ಕಾರಣ ಅವ್ಯವಸ್ಥೆಯನ್ನು ತಡೆಯಲು ಸಾಧ್ಯವಾಗಿಲ್ಲ.