ಶಿಕ್ಷಣ ಸಚಿವರ ಯೋಗಾಯೋಗ: ಮಂತ್ರಿಗಳು ಏನಂತಾರೆ ನೋಡಿ

ಬೆಂಗಳೂರು: ಶಿಕ್ಷಣ ಸಚಿವ ಸುರೇಶಕುಮಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಮಾಡಿರುವ ಪೋಟೋಗಳನ್ನ ಫೇಸ್‌ಬುಕ್‌ನಲ್ಲಿ ಹಾಕಿ ಹೀಗೆ ಬರೆದುಕೊಂಡಿದ್ದಾರೆ…
ಇಂದು #ವಿಶ್ವ_ಯೋಗ_ದಿನ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ 2015 ರ ಜೂನ್ 21 ರಿಂದ ಪ್ರಾರಂಭವಾದ ಈ ದಿನಾಚರಣೆಯನ್ನು ವಿಶ್ವದ 180 ಕ್ಕೂ ಹೆಚ್ಚು ದೇಶಗಳು ಆಚರಿಸುತ್ತವೆ.
ಯೋಗದಲ್ಲಿ ನಿರತ ಶಿಕ್ಷಣ ಸಚಿವರು
ಈ ಕಾರ್ಯಕ್ರಮ ವಿಶ್ವಕ್ಕೆ ಭಾರತದ ಮಹತ್ವದ ಕೊಡುಗೆ.
ಕೊರೋನಾ ಕಾರಣ ಈ ವರ್ಷ ಸಾಮೂಹಿಕ ಯೋಗ ಪ್ರದರ್ಶನವಿಲ್ಲ.
ಆದರೆ ಯೋಗದಿನದ ಆಚರಣೆ ಅಭಾದಿತ.