“ಮೂರು ದಿನಗಳ ನಂತರ” ಕಾಲವಾಡದ ಬಳಿ ಹಳ್ಳದಲ್ಲಿ ಸಿಲುಕಿದ್ದ ರೈತನಿಗಾಗಿ ಕಾರ್ಯಾಚರಣೆ- Exclusive

ನವಲಗುಂದ: ಜಮೀನಿನಲ್ಲಿ ಕೆಲಸ ಮಾಡಲು ಹೋಗಿದ್ದ ವ್ಯಕ್ತಿಯೋರ್ವ ಹಳ್ಳ ಬಂದ ಪರಿಣಾಮ ಕಳೆದ ಮೂರು ದಿನದಿಂದಲೂ ಅಲ್ಲಿಯೇ ಉಳಿದ ಘಟನೆ ನಡೆದಿದ್ದು, ಇದೀಗ ಕಾರ್ಯಾಚರಣೆ ಆರಂಭವಾಗಿದೆ.
ಲಕ್ಷ್ಮಣ ಬಾರಕೇರ ಅಲಿಯಾಸ್ ತಳವಾರ ಎಂಬಾತನೇ ಸಿಲುಕಿಕೊಂಡಿದ್ದು, ಹೊಲದಲ್ಲಿನ ಕಲ್ಯಾಣ ಬಸವೇಶ್ವರ ದೇವಸ್ಥಾನವೇ ಆತನಿಗೆ ಆಸರೆಯಾಗಿದೆ.
ಎಕ್ಸಕ್ಲೂಸಿವ್ ವೀಡಿಯೋ…
ತಾಲೂಕಿನ ಆಡಳಿತಕ್ಕೆ ಈ ವಿಷಯ ಯಾವಾಗ ತಿಳಿಯಿತೋ ಎಂಬುದು ಗೊತ್ತಾಗಿಲ್ಲ. ಆದರೆ, ಮೂರು ದಿನಗಳ ನಂತರ ಕಾರ್ಯಾಚರಣೆ ಆರಂಭವಾಗಿದ್ದು, ಸಾಕಷ್ಟು ಜನರಿಗೆ ತೀವ್ರ ಬೇಸರ ಮೂಡಿಸಿದೆ.