Posts Slider

Karnataka Voice

Latest Kannada News

ಒಂಟಿ ಕಳ್ಳನ ಬಂಧನ- ಡಾಬಾ ಮುಂದಿನ ವಾಹನಗಳೇ ಟಾರ್ಗೆಟ್

1 min read
Spread the love

ಹುಬ್ಬಳ್ಳಿ: ನಗರದ ಹೊರವಲಯದ ದಾಬಾಗಳ ಮುಂದೆ ನಿಲ್ಲುತ್ತಿದ್ದ ಲಾರಿಗಳನ್ನೇ ಟಾರ್ಗೆಟ್ ಮಾಡಿ ಮೊಬೈಲ್ ಕದಿಯುತ್ತಿದ್ದ, ಬೈಕ್ ಕಳ್ಳನೂ ಆಗಿರುವ ಒಂಟಿ ಕಳ್ಳನನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನ ಹಳೇಹುಬ್ಬಳ್ಳಿ ಹೆಗ್ಗೇರಿಯ ಮಾರುತಿನಗರದ ನಿವಾಸಿ ರಫೀಕ ಪತ್ತೆಸಾಬ ಧಾರವಾಡ ಎಂದು ಗುರುತಿಸಲಾಗಿದ್ದು, ಯಾರಿಗೂ ತಿಳಿಯದ ಹಾಗೇ ಒಬ್ಬನೇ ಬೈಕಿನಲ್ಲಿ ಹೋಗಿ ಇಂತಹ ಕೃತ್ಯ ಮಾಡುತ್ತಿದ್ದನೆಂದು ವಿಚಾರಣೆ ವೇಳೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತನಿಂದ ಐಪೋನ್ ಸಮೇತ 1ಲಕ್ಷ 25 ಸಾವಿರ ರೂಪಾಯಿ ಮೌಲ್ಯದ 9 ಮೊಬೈಲಗಳನ್ನ ಹಾಗೂ ದ್ವಿಚಕ್ರವಾಹನವನ್ನ ವಶಕ್ಕೆ ಪಡೆಯಲಾಗಿದೆ. ಐ ಪೋನ್ ನ್ನ ಲಾರಿಯಲ್ಲಿಯೇ ಕದ್ದಿರುವುದನ್ನ ಒಪ್ಪಿಕೊಂಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.

ಕಾರ್ಯಾಚರಣೆಯನ್ನ ಇನ್ಸಪೆಕ್ಟರ್ ಎಸ್.ಕೆ.ಹೊಳೆಣ್ಣನವರ ನೇತೃತ್ವದಲ್ಲಿ ಪಿಎಸ್ಐ ಸೀತಾರಾಮ ಲಮಾಣಿ, ಸಿಬ್ಬಂದಿಗಳಾದ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಬಸವರಾಜ ಹೆದ್ದೇರಿ, ರವಿ ಹೊಸಮನಿ, ರೇಣು ಸಿಕ್ಕಲಗಾರ, ಮಾಬುಸಾಬ ಮುಲ್ಲಾ, ಮಂಜು ಕಮತದ ಭಾಗವಹಿಸಿದ್ದು, ಆಯುಕ್ತರು ಸಿಬ್ಬಂದಿಗಳ ಕಾರ್ಯವನ್ನ ಶ್ಲಾಘಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed