ಕರ್ನಾಟಕದ ಸಿಂಗಂ- ತೆಲಂಗಾಣದಲ್ಲಿ ಮಾಡುತ್ತಿರುವುದೇನು ಗೊತ್ತಾ..?
ತೆಲಂಗಾಣ: ತಮ್ಮದೇ ಕೆಲಸದಿಂದ ದೇಶವ್ಯಾಪಿ ಹೆಸರು ಮಾಡಿರುವ ಐಪಿಎಸ್ ಅಧಿಕಾರಿಯೋರ್ವರು ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ಓರ್ವ ಪೇದೆಯಂತೆ ಕೆಲಸ ಮಾಡುತ್ತಿರುವುದು ರಾಜ್ಯದ ಗಮನ ಸೆಳೆದಿದ್ದು, ಹಿರಿಯ ಅಧಿಕಾರಿಯ ಕಾರ್ಯಕ್ಷಮತೆಯನ್ನ ಎಲ್ಲರೂ ಕೊಂಡಾಡುತ್ತಿದ್ದಾರೆ.
ಹುಬ್ಬಳ್ಳಿಯ ವಿಶ್ವನಾಥ ಸಜ್ಜನರ, ಸೈಬರಾಬಾದ್ ನ ಕಮೀಷನರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಕಳೆದ ಬಾರಿ ಹೈದ್ರಾಬಾದ್ ಗ್ಯಾಂಗ್ ರೇಪ್ ಆರೋಪಿಗಳನ್ನ ಎನ್ ಕೌಂಟರ್ ಮಾಡಿ, ದೇಶದಾಧ್ಯಂತ ಹೆಸರು ಮಾಡಿದ್ದ ಐಪಿಎಸ್ ಅಧಿಕಾರಿ, ಇದೀಗ ಮಕ್ಕಳು, ಮಹಿಳೆಯರನ್ನ ಉಳಿಸಲು ಪೇದೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿಯೂ ನಿರಂತರ ಮಳೆ ಸುರಿಯುತ್ತಿದ್ದು, ಸೈಬರಾಬಾದ್ ನ ಹಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಹೀಗಾಗಿ, ಮಹಿಳೆಯರು ಮಕ್ಕಳು ನೀರಿನಲ್ಲಿರುವಂತಾಗಿದ್ದು, ಅವರನ್ನ ಬೇರೆ ಕಡೆ ಸ್ಥಳಾಂತರ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ.
ಸ್ವತಃ ಕಮೀಷನರ್ ವಿಶ್ವನಾಥ ಸಜ್ಜನರ, ಫೀಲ್ಡಿಗೆ ಇಳಿದು ಜನರ ರಕ್ಷಣೆಗೆ ಮುಂದಾಗಿದ್ದಾರೆ. ಹಿರಿಯ ಅಧಿಕಾರಿಯೇ ಫೀಲ್ಡಿಗೆ ಇಳಿದಿರುವುದರಿಂದ ಇನ್ನುಳಿದ ಸಿಬ್ಬಂದಿ, ಮತ್ತಷ್ಟು ಉತ್ಸಾಹದಿಂದ ಕಾರ್ಯನಿರ್ವಹಣೆ ಮಾಡಿ, ಜನರನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
ಎಲ್ಲ ಕಾಲದಲ್ಲಿಯೂ ಉತ್ತಮ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ವಿಶ್ವನಾಥ ಸಜ್ಜನರ, ಹುಬ್ಬಳ್ಳಿಯವರು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.