ಪತ್ನಿ ಬಿಟ್ಟು ಸತ್ತೇ ಹೋದ ಪತಿ- ಕಾರ್ಯಾಚರಣೆಯಲ್ಲಿ ಶವವಾಗಿ ಸಿಕ್ಕ
1 min readಹುಬ್ಬಳ್ಳಿ: ಪತ್ನಿ ಹಿಂಬಾಲಿಸುತ್ತಿದ್ದರೂ ನಾನು ಸಾಯುತ್ತೇನೆ ಎಂದು ಹೇಳುತ್ತಲೇ ಪತ್ನಿ ಎದುರೇ ಕೆರೆಗೆ ಹಾರಿದ ವ್ಯಕ್ತಿಯು ಶವವಾಗಿ ಸಿಕ್ಕಿದ್ದು, ಬೆಳ್ಳಂಬೆಳಿಗ್ಗೆ ಸಂತೋಷನಗರದಲ್ಲಿ ಅಸಂತೋಷವನ್ನ ಸೃಷ್ಟಿ ಮಾಡಿದೆ.
ಟಿಫಿನ್ ಸೆಂಟರ್ ನಡೆಸುತ್ತಿದ್ದ ರೋಹಿತ ಪಾಟೀಲ, ರಾತ್ರಿಯಿಂದಲೇ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಬೆಳಿಗ್ಗೆ ಎದ್ದ ತಕ್ಷಣವೇ ಮತ್ತೆ ರಂಪಾಟ ಮಾಡತೊಡಗುತ್ತ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯಿಂದ ಹೊರಟೇ ಬಿಟ್ಟ. ತಕ್ಷಣವೇ ಪತ್ನಿ ಹಿಂದೆ ಬಂದು ತಿಳಿ ಹೇಳಿದರೂ, ಆಕೆಯ ಎದುರೇ ಕೆರೆಗೆ ಹಾರಿದ್ದ.
ಪ್ರಕರಣ ನಡೆಯುತ್ತಿದ್ದಂತೆ ಕೆರೆಗೆ ಸೀರೆ ಕಟ್ಟಿಕೊಂಡು ಕೆಲವರು ಇಳಿಯುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದರು. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬಂದು ರೋಹಿತನ ಹುಡುಕಾಟ ನಡೆಸಿದರು. ಆದರೆ, ಒಂದು ಗಂಟೆಯ ಕಾರ್ಯಾಚರಣೆಯಲ್ಲಿ ರೋಹಿತ ಶವವಾಗಿ ಸಿಕ್ಕಿಬಿದ್ದಿದ್ದಾನೆ.
ಕುಡಿತದ ಕಾರಣದಿಂದಲೇ ಪತ್ನಿ-ಪತಿ ನಡುವೆ ಆಗಾಗ ಜಗಳಗಳು ಆಗುತ್ತಿದ್ದವೆಂದು ಹೇಳಲಾಗಿದೆ. ಅದನ್ನೇ ಹೆಚ್ಚು ಮಾಡಿದ್ದರಿಂದಲೇ ಇಂತಹ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.