ಇಂದಿನಿಂದ ವ್ಯಾಪಾರ-ವಹಿವಾಟು ಬಂದ್: ಖುದ್ದು ಶಾಸಕರೇ ನಿರ್ಧಾರ
ಮೈಸೂರು: ಇಂದಿನಿಂದ ಹುಣಸೂರು ತಾಲೂಕಿನಾಧ್ಯಂತ ಮದ್ಯಾಹ್ನ 3ರ ನಂತರ ಎಲ್ಲಾ ವಹಿವಾಟು ಬಂದ್ ಮಾಡಲು ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕೊವಿಡ್ 19 ಟಾಸ್ಕ್ ಫೋಸ್೯ ಸಭೆಯಲ್ಲಿ ನಿರ್ಧರಿಸಲಾಗಿದೆ.
ವ್ಯಾಪಾರಿಗಳ ಸಂಘದ ಮನವಿ ಮೇರೆಗೆ ನಗರಸಭೆ ಸಭಾಂಗಣದಲ್ಲಿ ಕೋವಿಡ್ ಟಾಸ್ಕ್ ಪೋಸ್೯ ಸಭೆ ನಡೆಸಲಾಯಿತು. ಈ ಸಮಯದಲ್ಲಿ ಮಧ್ಯಾಹ್ನ 12 ರಿಂದಲೇ ವಹಿವಾಟು ಬಂದ್ ಮಾಡಿಸಲು ವ್ಯಾಪಾರಸ್ಥರ ಮನವಿ ಮಾಡಿಕೊಂಡರು. ಮೆಡಿಕಲ್ಸ್ ಸ್ಟೋರ್, ಹಾಲಿನ ಕೇಂದ್ರ, ಆಸ್ಪತ್ರೆ ಹೊರತಾಗಿ ಎಲ್ಲವನ್ನ ಬಂದ್ ಮಾಡಿ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಮಧ್ಯಾಹ್ನ 3ರ ನಂತರ ಸಾರ್ವಜನಿಕರು, ಬೈಕ್ ಸವಾರರು ಅನಾವಶ್ಯಕವಾಗಿ ತಿರುಗಾಡಬಾರದು. ಅಂಗಡಿಯವರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಇಡಬೇಕು. ಮಾಸ್ಕ್ ಇಲ್ಲದೆ ರಸ್ತೆಗೀಳಿದರೆ ದಂಡ ಗ್ಯಾರಂಟಿ. ತಾಲೂಕು ಆಡಳಿತದೊಂದಿಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಸಭೆಯಲ್ಲಿ ಮನವಿ ಮಾಡಿಕೊಂಡಿತು.