ಹುಬ್ಬಳ್ಳಿಯ ಗೋಪನಕೊಪ್ಪದ ನಡುರಸ್ತೆಯಲ್ಲೇ “ಚುಚ್ಚಿ ಚುಚ್ಚಿ” ಯುವಕನ ಬರ್ಭರ ಹತ್ಯೆ- ಕಂಕಣ ಕಟ್ಟಿಕೊಂಡಿದ್ದ “ಅಕ್ಕ” ನುಡಿದ ಸತ್ಯ…!!! Exclusive Videos…

ಹಬ್ಬದ ದಿನವೇ ಗೋಪನಕೊಪ್ಪದಲ್ಲಿ ಚಾಕುವಿನಿಂದ ಇರಿದು ನಡು ರಸ್ತೆಯಲ್ಲಿಯೇ ಯುವಕನ ಭೀಕರ ಕೊಲೆ
ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಹಾನವಮಿ ಹಬ್ಬದ ದಿನವೇ ಯುವಕನ ಮೇಲೆ ಆತನ ಸ್ನೇಹಿತರೇ ಚಾಕುವಿನಿಂದ ಸಿಕ್ಕ ಸಿಕ್ಕಲ್ಲಿ ಇರಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪನಕೊಪ್ಪದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕೊಲೆಯಾದ ಯುವಕನನ್ನು ಗೋಪನಕೊಪ್ಪದ 22 ವರ್ಷದ ಶಿವರಾಜ ಅಂತಾ ಗುರುತಿಸಲಾಗಿದೆ. ಈತ ಗುರುವಾರ ಗೋಪನಕೊಪ್ಪದ ಕರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಕ್ಷುಲ್ಲಕ ವಿಚಾರಕ್ಕೇ ಶಿವರಾಜ ಹಾಗೂ ಸಂದೀಪ್ ಎಂಬ ಯುವಕನ ನಡುವೆ ಜಗಳ ಪ್ರಾರಂಭವಾಗಿ ಇಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಗ ಅಲ್ಲೇ ಇದ್ದ ಕೆಲವರು ಇಬ್ಬರನ್ನು ಕೂಡಾ ಬುದ್ದಿ ಹೇಳಿ ಕಳುಹಿಸಿದ್ದರು ಆದ್ರೆ ಇಂದು ರಾತ್ರಿ ಏಕಾಏಕಿ ಆತನ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಅಂತಾನೇ ಕೊಲೆಯಾದ ಶಿವರಾಜನ ಗೆಳೆಯ ಕೀರ್ತಿರಾಜ.
ಶುಕ್ರವಾರ ಶಿವರಾಜ ಮನೆಯಲ್ಲಿ ಹಬ್ಬದ ನಿಮಿತ್ತ ಕುರಿಯನ್ನು ಕಡಿದು ಅಡುಗೆ ಮಾಡಲಾಗಿತ್ತು,ಇಂದು ಮಧ್ಯಾಹ್ನದ ವರೆಗೂ ತನ್ನ ಸ್ನೇಹಿತರ ಜೊತೆ ಸೇರಿ ದೇವರಿಗೆ ನೈವಿದ್ಯ ಅರ್ಪಣೆ ಮಾಡಿ ತನ್ನ ಗೆಳೆಯರಿಗೆ ಊಟವನ್ನು ಮಾಡಿಸಿ ಕಳುಹಿಸಿದ್ದಾನೆ,ರಾತ್ರಿ 10 ಗಂಟೆಗೆ ಊಟವನ್ನು ಮಾಡಿ ಇಲ್ಲೇ ಹೊರಗಡೆ ಹೋಗಿ ಬರ್ತೀನಿ ಅಂತಾ ಹೇಳಿದವ ಮನೆ ಬಿಟ್ಟು ಹೋದ ಕೆಲವೇ ಕೆಲವು ನಿಮಿಷಗಳಲ್ಲಿ ಚಾಕು ಇರಿತದಿಂದ ಭೀಕರವಾಗಿ ಕೊಲೆ ಮಾಡಿದ್ದಾರೆ ಅಂತಾಳೆ ಶಿವರಾಜನ ಅಕ್ಕ.
ಶಿವರಾಜನ ಸ್ನೇಹಿತರು ಹೇಳುವ ಪ್ರಕಾರ ಇದು ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಮಾಡಿದ್ದಾರೆ ಅಂತಾ ಹೇಳುತ್ತಿದ್ದಾರೆ. ನಿನ್ನೇ ಜಗಳ ತೆಗೆದ ಸಂದೀಪ್ ಎಂಬಾತ ನಿನ್ನ ನಾಳೆ ನೋಡ್ಕೋತೀನಿ ಅಂತಾ ಶಿವರಾಜಗೆ ಧಮ್ಕಿ ಹಾಕಿದ್ದ ಆತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಅಂತಾ ಆರೋಪ ಮಾಡ್ತಿದ್ದಾರೆ.ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಶವಾಗಾರಕ್ಕೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿದ್ದರು.
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದಾಗ ಯಾವ ಕಾರಣಕ್ಕಾಗಿ ಮಾಡಿದ್ದಾರೆ ಎಂಬ ರಹಸ್ಯ ಹೊರಬೀಳಲಿದೆ.