40 ದಿನ, 960 ಗಂಟೆ: ಹುಬ್ಬಳ್ಳಿ-ಧಾರವಾಡ ಪೊಲೀಸರು ಏನು ಮಾಡ್ತಿದ್ದಾರೆ ಗೊತ್ತಾ…!?
1 min readಹುಬ್ಬಳ್ಳಿ: ಅವಳಿನಗರದ ಪೊಲೀಸರು ಸರಕಾರದ ಕೆಲಸ ದೇವರ ಕೆಲಸವೆಂಬ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ನಿರಂತರವಾಗಿ ಜನರ ನೆಮ್ಮದಿಗಾಗಿ ತಮ್ಮ ಜೀವನವನ್ನ ಬೀದಿಯಲ್ಲಿ ಕಳೆಯುತ್ತಿದ್ದಾರೆ.
ಹೌದು… ಬಹುತೇಕ ಡಿಸೆಂಬರ್ 18 ರಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಮತ್ತು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾದ ನಂತರ ಹಲವು ವಿದ್ಯಮಾನಗಳು ನಡೆದವು. ಬೈರಿದೇವರಕೊಪ್ಪದ ಬಳಿಯ ದರ್ಗಾ ತೆರವು, ಯುವ ಜನೋತ್ಸವ, ಪ್ರಧಾನಿಯ ಆಗಮನ, ಇಂದು ಅಮಿತ ಶಾ ಬರುವಿಕೆ, ಸಿಎಂ ಅಂತೂ ವಾರದಲ್ಲಿ ಎರಡ್ಮೂರು ಬಾರಿ ಈ ಭಾಗಕ್ಕೆ ಬಂದು ಹೋಗುವುದು ನಡೆಯುತ್ತಲಿದೆ.
ಇದರ ನಡುವೆ ಕೆಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ನಡೆಯುತ್ತಲೇ ಇವೆ. ಈ ಹಿಂದಿನ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಸೇರಿದಂತೆ ಈಗೀನ ಪೊಲೀಸ್ ಆಯುಕ್ತ ರಮಣದೀಪ ಗುಪ್ತಾ ಅವರಾಗಲಿ, ಎಸ್ಪಿ ಲೋಕೇಶ ಜಗಲಾಸರ್ ಅವರು ಕೂಡಾ ತಮ್ಮ ಸಿಬ್ಬಂದಿಗಳ ಜೊತೆಗೆ ನಿಂತು ಎಲ್ಲವನ್ನೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಡೆಸುತ್ತಿದ್ದಾರೆ.
ಪೊಲೀಸರು ಮನುಷ್ಯರೇ. ಅವರಿಗೂ ಕುಟುಂಬವಿದೆ. ಅವರಿಗೂ ಬಂಧುಗಳು ಇರ್ತಾರೆ ಎಂಬ ಕಟು ಸತ್ಯ ಮರೆತು ಕೆಲವರು ‘ಹಾಗೀಗೆ’ ಮಾತಾಡ್ತಾರೆ. ಆದರೆ, ಈ 40 ದಿನಗಳ 960 ಗಂಟೆಗಳ ಬಗ್ಗೆ ಎದುರಿಗೆ ಸಿಕ್ಕ ಪೊಲೀಸರ ಜೊತೆ ಮಾತಾಡಿ ನೋಡಿ, ಅವರ ಸ್ಥಿತಿ ನೋಡಿ ನೀವೂ ಕಣ್ಣೀರಾಗೋದು ಗ್ಯಾರಂಟಿ.
ಸಾರ್ವಜನಿಕರಿಗಾಗಿ ತಮ್ಮ ಜೀವವನ್ನ ಕಂಡ ಕಂಡಲ್ಲಿ ‘ತೇಯುತ್ತಿರುವ’ ಪೊಲೀಸರಿಗೆ ಕರ್ನಾಟಕವಾಯ್ಸ್.ಕಾಂ ಹ್ಯಾಟ್ಸಾಫ್ ಹೇಳತ್ತೆ.