‘ಸತಿ’ ಎದುರೇ ಹುಬ್ಬಳ್ಳಿಯಲ್ಲಿ ಕೆರೆಗೆ ಹಾರಿದ ‘ಪತಿ’: ಸೀರೆ ಕಟ್ಟಿ ಹುಡುಕುವ ಪ್ರಯತ್ನ
1 min readಹುಬ್ಬಳ್ಳಿ: ವ್ಯಕ್ತಿಯೋರ್ವ ಬೆಳ್ಳಂಬೆಳಿಗ್ಗೆ ತಾನೂ ಮಾಡುತ್ತಿದ್ದ ಕೆಲಸವನ್ನ ಬಿಟ್ಟು ನೇರವಾಗಿ ಬಂದು ಕೆರೆಗೆ ಹಾರಿದ ಘಟನೆ ಹುಬ್ಬಳ್ಳಿಯ ಸಂತೋಷನಗರದಲ್ಲಿ ನಡೆದಿದ್ದು, ಹಿಂದೆ ಬಂದ ಪತ್ನಿ ಏನೇ ಹೇಳಿದರೂ ಕೇಳದೇ ಕೆರೆಯಲ್ಲಿ ಮುಳುಗಿದ್ದಾನೆ.
ಸಂತೋಷನಗರದಲ್ಲಿ ಟಿಪಿನ್ ಸೆಂಟರ್ ನಡೆಸುತ್ತಿದ್ದ ರೋಹಿತ ಪಾಟೀಲ ಎಂಬಾತನೇ ಕೆರೆಯಲ್ಲಿ ಮುಳುಗಿದ್ದ, ಆತನ ಪತ್ತೆಗಾಗಿ ಸ್ಥಳೀಯರು ಸೀರೆಗಳನ್ನ ಕಟ್ಟಿ ಕೆರೆಯಲ್ಲಿ ಇಳಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.
ರೋಹಿತ ಪಾಟೀಲ ತನ್ನ ಪತ್ನಿಯೊಂದಿಗೆ ಮನಸ್ತಾಪ ಮಾಡಿಕೊಂಡು ಹೀಗೆ ಮಾಡಿಕೊಂಡಿದ್ದಾನೆಂದು ಹೇಳಲಾಗುತ್ತಿದ್ದು, ತನ್ನ ಪತಿ ಕಣ್ಣೇದುರಿಗೆ ಕೆರೆಯಲ್ಲಿ ಮುಳುಗಿರುವ ದೃಶ್ಯವನ್ನ ನೋಡಿದ ಪತ್ನಿ, ಹಾಗೂ ಸಂಬಂಧಿಕರು ರೋಧಿಸುತ್ತ ಕೆರೆಯ ದಂಡೆಯ ಮೇಲೆ ಕೂತಿದ್ದಾರೆ.
ಘಟನೆಯಿಂದ ನೂರಾರೂ ಜನರು ಸಂತೋಷನಗರದ ಕೆರೆಯ ಬಳಿ ಜಮಾಯಿಸಿದ್ದು, ಅಶೋಕನಗರ ಠಾಣೆ ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ. ರೋಹಿತ ಪಾಟೀಲ, ಟಿಫಿನ್ ಸೆಂಟರ್ ನಡೆಸುತ್ತಿದ್ದರಿಂದ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದನೆಂದು ಹೇಳಲಾಗಿದೆ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ಏಕೆ ಎಂದು ಎಲ್ಲರೂ ಪ್ರಶ್ನಿಸುವಂತಾಗಿದೆ.