ಹುಬ್ಬಳ್ಳಿಯಲ್ಲಿ “ಬಡ್ಡಿ ಚಾಕು ಇರಿತ”- ರೌಡಿಷೀಟರ್‌ಗಳ ನಿಲ್ಲದ ಹಾವಳಿ…
1 min read*Exclusive*
ಹುಬ್ಬಳ್ಳಿಯಲ್ಲಿ ಬಡ್ಡಿಗಾಗಿ ನಡು ರಸ್ತೆಯಲ್ಲಿಯೇ ಚಾಕು ಇರಿದ; ಬಡ್ಡಿ ಬಕಾಸುರರು
ಹುಬ್ಬಳ್ಳಿ: ಸಾಲ ಯಾರಿಗೆ ಇಲ್ಲ ಹೇಳಿ ತಿರುಪತಿ ತಿಮ್ಮಪ್ಪನಿಗೂ ಬಿಡದ ಸಾಲ ಮನುಜರನ್ನೇ ಬಿಟ್ಟಿತೇ,ಆದ್ರೆ ಅದೆ ಸಾಲ ಎಂಬುದು ಇದೀಗ ಬಡ್ಡಿಯ ರೂಪದಲ್ಲಿ ಬಡ ಜನರ ಪಾಲಿಗೆ ಮೃತ್ಯು ಕುಪವಾಗಿದ್ದು, ಇದರಲ್ಲಿ ಬಡ ಜನರು ಸಿಕ್ಕು ಸಾಯುತ್ತಿದ್ದಾರೆ,ಆದ್ರೆ ಬಡ್ಡಿ ಕುಳಗಳು ಮಾತ್ರ ಬಡವರನ್ನು ಮುಕ್ಕಿ ತಿನ್ನುತ್ತಾ ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ,ಆಟೋ ಚಾಲಕನೊಬ್ಬ ತನ್ನ ಮನೆಯ ಅಡಚಣೆಗೆ ಪಡೆದ ಸಾಲವೆ ಇದೀ ಆತನಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ ಅಷ್ಟಕ್ಕೂ ಇದೇನು ಬಡ್ಡಿ ಕುಳಗಳ ವರದಿ ಇಲ್ಲಿದೆ.
ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ತೌಶೀಫ್ ಮುಲ್ಲಾ ಆನಂದ ನಗರದ ನಿವಾಸಿ ಹಲವು ದಿನಗಳಿಂದ ನಗರದಲ್ಲಿ ಆಟೋ ಚಾಲನೆ ಮಾಡುತ್ತಾ ಬದುಕನ್ನು ಸಾಗಿಸುತ್ತಿದ್ದ,ಆದ್ರೆ ಮನೆಯ ಅಡಚಣೆ ಸಾಲವನ್ನು ಪಡೆದಿದ್ದು ಇದೀಗ ಅದೇ ಸಾಲ ಆತನಿಗೆ ಮುಳುವಾಗಿ ಪರಿಣಮಿಸಿದೆ.
Exclusive video
ತೌಶೀಫ್ ಕಳೆದ ಕೆಲವು ದಿನಗಳ ಹಿಂದೆ ಮನೆಯಲ್ಲಿ ಅಡಚಣೆ ಸಲುವಾಗಿ ಹೆಗ್ಗೇರಿ ಕಾಲೋನಿಯ ಪ್ರಮೋದ ಮಾನೆ ಎಂಬಾತನಿಂದ 40 ಸಾವಿರ ರೂಪಾಯಿಯನ್ನು ವಾರದ ಬಡ್ಡಿಯ ರೀತಿಯಲ್ಲಿ ಪಡೆದಿದ್ದ,ಹಾಗೆಯೇ ಕೆಲವು ದಿನಗಳ ಕಾಲ ಸರಿಯಾಗಿ ಬಡ್ಡಿಯನ್ನು ಕಟ್ಟುತ್ತಾ ಬಂದಿದ್ದ,ಆದ್ರೆ ಮನೆಯಲ್ಲಿನ ಸಮಸ್ಯೆ ಉಲ್ಬಣ ಆದಾಗ 2 ತಿಂಗಳಿಂದ ಬಡ್ಡಿಯನ್ನು ಕಟ್ಟಿರಲಿಲ್ಲ.
ಹೀಗಾಗಿ ಪ್ರಮೋದ ಬಡ್ಡಿಯನ್ನು ಕಟ್ಟು ಅಂತಾ ತೌಶೀಫ್ ಗೆ ದುಂಬಾಲು ಬಿದ್ದಿದ್ದ ಅಷ್ಟೇ ಅಲ್ಲದೆ ಇಂದು ಸಾಯಂಕಾಲ ಕಾರವಾರ ರಸ್ತೆಯಲ್ಲಿನ ಚಾಟ್ನಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಏಕಾಏಕಿ ಬಂದ ಪ್ರಮೋದ ಆಟೋದಲ್ಲಿ ಕೂತಿದ್ದ ತೌಶೀಫ್ ನ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದಾನೆ,ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ತೌಶೀಫ್ ನಡು ರಸ್ತೆಯಲ್ಲಿಯೇ ಬಿದ್ದು ಒದ್ದಾಡುತ್ತಿದ್ದಾಗ ಆಟೋ ಚಾಲಕನೊಬ್ಬ ತೌಶೀಫ್ ನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾನೆ.
ಸಧ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನ ಸ್ಥಿತಿಯನ್ನು ನೋಡಿದ ಪತ್ನಿ ಪರ್ವೀನ್ ಬಾನು ಕಣ್ಣೀರು ಹಾಕುತ್ತಿದ್ದು,ನನ್ನ ಗಂಡನಿಗೆ ಹೆಚ್ಚು ಕಡಿಮೆ ಆದ್ರೆ ಯಾರು ಹೊಣೆ ನನ್ನ ಚಿಕ್ಕ ಚಿಕ್ಕ ಮಕ್ಕಳಿಗೆ ಗತಿ ಯಾರು ನನಗೆ ದಯಮಾಡಿ ನ್ಯಾಯವನ್ನು ಕೊಡಿಸಿ ಅಂತಾ ಮಾಧ್ಯಮದ ಮುಂದೆ ಕಣ್ಣೀರನ್ನು ಹಾಕಿದ್ದಾಳೆ,ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಘಟನೆಯ ಮಾಹಿತಿಯನ್ನು ಕೂಡಾ ಕಲೆಹಾಕುತ್ತಿದ್ದಾರೆ.
ನಗರದಲ್ಲಿ ಹಲವು ದಿನಗಳಿಂದ ಮೀಟರ್ ಬಡ್ಡಿ,ವಾರದ ಬಡ್ಡಿಯಿಂದ, ಇದೀಗ ದುಡಿದು ತಿನ್ನುವ ವರ್ಗದವರು ವಿಪರೀತ ಶೋಷಣೆ ಅನುಭವಿಸುತ್ತಿದ್ದಾರೆ, ಈ ರೀತಿಯಾಗಿ ಅಮಾಯಕರ ರಕ್ತ ಹೀರುವ ಬಡ್ಡಿ ಕುಳುಗಳ ಮೇಲೆ ಹೊಸದಾಗಿ ಬಂದಿರುವ ಪೊಲೀಸ್ ಕಮೀಷನರ್ ರಮನ್ ಗುಪ್ತ ಯಾವ ರೀತಿಯಾದ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.