ಹುಬ್ಬಳ್ಳಿ: ಎನ್‌ಕೌಂಟರ್ ಮಾಡಿದ್ದು “ಲೇಡಿ ಸಿಂಗಂ” ಅನ್ನಪೂರ್ಣ- ಪಿನ್ ಟು ಪಿನ್ ಮಾಹಿತಿ….!!!

ಹುಬ್ಬಳ್ಳಿ: ಇಂದು ಮಧ್ಯಾಹ್ನದಿಂದ ಆರಂಭಗೊಂಡಿದ್ದ ಬೇಸರ, ಕಣ್ಣೀರು, ನೋವು, ಹತಾಶೆ ಎಲ್ಲವನ್ನೂ ಸಂಜೆಯವರೆಗೆ ಬೇರೆ ತೆರನಾಗಿ ಅನುಭವಿಸುವಂತೆ ಮಾಡಿದ್ದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರರೇಟ್.
ಹೌದು… ವಿಜಯನಗರದ ಟಾಯ್ಲೆಟ್‌ನಲ್ಲಿ ಐದು ವರ್ಷದ ಬಾಲಕಿಯ ಹತ್ಯೆಯಾದ ಶವ ಸಿಕ್ಕಿದಾಗಿಂದ ಸಾವಿರಾರು ಮನಗಳು ಕಣ್ಣೀರಾಗಿದ್ದವು. ಆ ಎಲ್ಲ ಮನಸ್ಸುಗಳು ಹಗುರವಾಗಿದ್ದು ಮಾತೃ ಹೃದಯದ ಲೇಡಿ ಸಿಂಗಂ ಪಿಎಸ್ಐ ಅನ್ನಪೂರ್ಣ ಅವರ ಗುಂಡಿನಿಂದ.
ವೀಡಿಯೋ….
ವಾಣಿಜ್ಯನಗರಿಯಲ್ಲಿ ನಡೆದಿದ್ದ ಈ ಘಟನೆಗೆ ಬೇರೆ ದಾರಿ ಇರಲೇ ಇಲ್ಲವೆಂಬ ಭಾವನೆಯನ್ನ ಮೂಡಿಸಿತ್ತು. ಹಲವರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸತೊಡಗಿದರು.
ಅಶೋಕನಗರ ಠಾಣೆಯ ಮುಂದೆ ಸಾರ್ವಜನಿಕರು ಜಮಾವಣೆಗೊಂಡು ಆರೋಪಿಯನ್ನ ಕೈಗೆ ಕೊಡಿ ಎನ್ನತೊಡಗಿದ್ದರು. ಆದರೆ, ಅದೇಲ್ಲವನ್ನೂ ಕೇಳಿಸಿಕೊಂಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಎನ್‌ಕೌಂಟರ್ ಮಾಹಿತಿ ನೀಡಿದರು.