ಧಾರವಾಡ: ಸಿನೇಮಾ ಸ್ಟೈಲ್ನಲ್ಲಿ ಮಹಿಳಾ ಪಿಎಸ್ಐ ರೇಣುಕಾ ಐ’ರಾಣಿ’ ಚೇಸಿಂಗ್: ಸಿಕ್ಕಿಬಿದ್ದ ದರೋಡೆಕೋರರು…!!!

ಧಾರವಾಡ: ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನ ದೋಚಿಕೊಂಡು ಪರಾರಿಯಾಗುತ್ತಿದ್ದ ದರೋಡೆಕೋರರನ್ನ ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಇಬ್ಬರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪಿಎಸ್ಐ ರೇಣುಕಾ ಐರಾಣಿ ಯಶಸ್ವಿಯಾಗಿದ್ದಾರೆ.
ದಿನಾಂಕ 21-05-2024 ರಂದು ರಾತ್ರಿ. 09.30 ಗಂಟೆಗೆ, ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಅಳ್ವಾವರ ರಸ್ತೆಯ ಮಂಡಿಹಾಳ ಗ್ರಾಮದ ಹತ್ತಿರ 4 ಜನ ದರೋಡೆಕೋರರು ಬೈಕ್ ನಲ್ಲಿ ಹೋಗುತ್ತಿದ್ದವನನ್ನ ನಿಲ್ಲಿಸಿ, ಅವನಿಂದ ಮೊಬೈಲ್, ಹಣದ ಪಾಕೀಟ್ನ್ನು ದೋಚಿಕೊಂಡು ಹೋಗುತ್ತಿದ್ದಾಗ, ಸ್ಥಳೀಯರು ಕೂಡಲೇ ಮಹಿಳಾ ಪಿಎಸ್ಐ ರೇಣುಕಾ ಐರಾಣಿ ಅವರಿಗೆ ಕರೆ ಮಾಡಿ, ಘಟನೆ ಕುರಿತು ಹೇಳಿದಾಗ, ತಕ್ಷಣವೇ ಪಿಎಸ್ಐ ರೇಣುಕಾ ಐರಾಣಿಯವರು ತಮ್ಮ ಸ್ವಂತ ಕಾರದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ದರೋಡೆಕೋರರನ್ನು ಹಿಂಬಾಲಿಸಿ 2 ಜನ ದರೋಡೆಕೋರರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಎಸ್ಐ ರೇಣುಕಾ ಐರಾಣಿಯವರ ಕರ್ತವ್ಯ ನಿಷ್ಠೆ ಮತ್ತು ದೈರ್ಯ ಪ್ರದರ್ಶಿಸಿ, ದರೋಡೆಕೋರರನ್ನು ಬಂದಿಸುವಲ್ಲಿ ಯಶಸ್ವಿಯಾಗದ್ದರಿಂದ ಅವರ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಅವರು ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.