“3” ಹತ್ಯೆಕೋರರ “5” ಕಾಲುಗಳಿಗೆ ಹುಬ್ಬಳ್ಳಿಯಲ್ಲಿ ಗುಂಡೇಟು…!!! ಅಷ್ಟೇ… ಅಷ್ಟೇ….!!!

ಹುಬ್ಬಳ್ಳಿ: ಲಿಂಗರಾಜನಗರದ ಗೋಲ್ಡನ್ ಹೈಟ್ಸ್ ಬಾರ್‌ನ ಪಾರ್ಕಿಂಗ್‌ನಲ್ಲಿ ಯುವಕನನ್ನ ಇರಿದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾಕಿದ ಘಟನೆ ನಡೆದಿದೆ.
ಆಕಾಶ ವಾಲ್ಮೀಕಿ ಎಂಬ 24 ವಯಸ್ಸಿನ ಯುವಕನನ್ನ ಪಾರ್ಕಿಂಗ್ ಸ್ಥಳದಲ್ಲಿ ಮನಬಂದಂತೆ ಇರಿದು ಹತ್ಯೆ ಮಾಡಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದಾಗ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಪೊಲೀಸರು ಕಾಲಿಗೆ ಗುಂಡು ಹಾಕಿ, ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
MTS ಕಾಲನಿಯಲ್ಲಿ ಗುಂಡೇಟು ಬಿದ್ದಿದ್ದು, ಅವರುಗಳನ್ನೂ ಕಿಮ್ಸಗೆ ದಾಖಲು ಮಾಡಲಾಗಿದೆ. ಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಆನಂದನಗರದ ಅಭಿಷೇಕ ಶಿರೂರ, ವಿನೋದ ಅಂಬಿಗೇರ ಹಾಗೂ ಯಲ್ಲಪ್ಪ ಕೋಟಿ ಎಂಬಾತನಿಗೆ ಗುಂಡೇಟು ಬಿದ್ದಿದೆ.