ಹುಬ್ಬಳ್ಳಿ ಕಿಮ್ಸ್‌ನಲ್ಲಿ “ಬೆಡ್‌ಶೀಟ್ ಸಮೇತ” ರೋಗಿ ನಾಪತ್ತೆ- ಕಂಗಾಲಾದ ಸಂಬಂಧಿಕರಿಂದ ಪೊಲೀಸರಿಗೆ ದೂರು…!!!
ಹುಬ್ಬಳ್ಳಿ: ಮಿದುಳು ರೋಗದಿಂದ ಬಳಲುತ್ತಿದ್ದ ರೋಗಿಯೋರ್ವ ಕಿಮ್ಸ್‌ನಿಂದ ನಾಪತ್ತೆಯಾಗಿದ್ದು, ದಿಕ್ಕು ಕಾಣದಂತಾದ ಸಂಬಂಧಿಕರು ಪೊಲೀಸರ ಮೊರೆ ಹೋಗಿ, ಕಿಮ್ಸ್ ಸಿಬ್ಬಂದಿಗೆ ಹಿಡಿಶಾಪ ಹಾಕುವಂತಾಗಿದೆ.
ಇಂದು ಬೆಳಗಿನ ಜಾವ ಆಸ್ಪ ತ್ರೆಯಿಂದ ರೋಗಿ ಹೋಗಿದ್ದಾರೆ. ಕಳೆದ 26ರಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಮಿದುಳು ಸಂಬಂಧಿ ಖಾಯಿಲೆಯಿಂದ ಯಲ್ಲಪ್ಪ ಕರೇಕಲ್ ದಾಖಲಾಗಿದ್ದರು.
ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಮುತ್ತರಗಿ ನಿವಾಸಿಯಾಗಿರೋ ಯಲ್ಲಪ್ಪ, ಮೂರು ಗಂಟೆಗೆ ಬೆಡ್‌ಶೀಟ್ ಸಮೇತ ಹೊರ ಹೋಗಿದ್ದಾರೆ.
ರೋಗಿ ನಾಪತ್ತೆಯಾಗಿರೋ ಹಿನ್ನೆಲೆ ಸಂಭಂದಿಕರು ಕಂಗಾಲಾಗಿ, ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.