ಬೆಳೆವಿಮೆ “ಪರಿಹಾರ 50-50”- ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಗಮನಿಸಬೇಕಾದ ಅಂಶ….!!!

ಧಾರವಾಡ: ಬಾನಗಡಿ ಏಜೆಂಟರು ಕೆಲ ಶ್ರೀಮಂತ ನೀಚರೊಂದಿಗೆ ಸೇರಿ ನಡೆಸುತ್ತಿರುವ ಬೆಳೆವಿಮೆ ಪರಿಹಾರ “50-50” ವಂಚನೆಯು ಈ ಬಾರಿಯ ಹಿಂಗಾರು ಬೆಳೆಯಲ್ಲಿಯೂ ನಡೆಯುವ ಎಲ್ಲ ಸಾಧ್ಯತೆಗಳಿದ್ದು, ಧಾರವಾಡ ಜಿಲ್ಲೆಯ ಅಂಕಿ ಅಂಶವನ್ನ ಈಗಲೇ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪಡೆಯುವ ಅವಶ್ಯಕತೆಯಿದೆ.
ಹಿಂಗಾರು ಬೆಳೆ ವಿಮೆಯಲ್ಲಿಯೂ ಕೂಡಾ ಫಿಪ್ಟಿ-ಫಿಪ್ಟಿ ವಂಚನೆ ನಡೆಸಲು ಈ ಮೊದಲು ಮುಂಗಾರು ಹಂಗಾಮಿನಲ್ಲಿ ವಂಚನೆ ಮಾಡಿರುವ ಬಹುತೇಕರು ಶಾಮೀಲಾಗಿರುವ ಕುರಿತು ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯಿದೆ.
2024ರ ಮುಂಗಾರು ಬೆಳೆಯ ವಿಮೆ ತುಂಬಿರುವ ಕೆಲ ಶ್ರೀಮಂತ ರೈತರು, ಏಜೆಂಟ್‌ರೊಂದಿಗೆ ಶಾಮೀಲಾಗಿ ಬೆಳೆವಿಮೆ ಹಣವನ್ನ ಈಗಾಗಲೇ ಭರಿಸಿದ್ದಾರೆ. ಹಿಂಗಾರು ಬೆಳೆವಿಮೆಯನ್ನ ರೈತರು ನವೆಂಬರ್ ಕೊನೆಯವರೆಗೆ ತುಂಬಲು ಅವಕಾಶವಿತ್ತು. ಈ ಸಮಯದಲ್ಲಿ ಆಗಿರುವ ದಿನಾಂಕವಾರ ‘ಎನ್‌ರೋಲ್’ ಆಗಿರುವ ಮಾಹಿತಿಯನ್ನ ಪಡೆಯಲು ಡಿಸಿಯವರು ಮುಂದಾಗಬೇಕಿದೆ.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಓಗಳು ಈ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾತುಗಳಿವೆ. ಇದನ್ನ ವಿಚಾರಣೆ ಮಾಡುವ ಜರೂರತ್ತು ಜಿಲ್ಲಾಧಿಕಾರಿಯವರಿಗೆ ಇದೆ ಅಲ್ವಾ.
ಬೆಳೆವಿಮೆ “ಪರಿಹಾರ 50-50′ ವಂಚನೆಯ ನಿರಂತರ ಮಾಹಿತಿಗಳು ಹೊರಗೆ ಬರುತ್ತಿದ್ದ ಹಾಗೇ ಕೆಲವು ಹಿರಿಯ ಅಧಿಕಾರಿಗಳು ಪ್ರಮುಖ ಪತ್ರಿಕೆಗಳಲ್ಲಿ ಹಣ ಕೊಟ್ಟು ಬರೆಸಿಕೊಳ್ಳುವ ಖಯಾಲಿಗೆ ಬಿದ್ದಿರುವುದು ಕಂಡು ಬರತೊಡಗಿದೆ.
ಬಡ ರೈತರ ಹೊಟ್ಟೆಗೆ ಬೆಂಕಿ ಹಾಕಿ, ವಂಚನೆಯಲ್ಲಿ ತೊಡಗಿರುವ ಕೆಲ ಶ್ರೀಮಂತ ರೈತರು ಮತ್ತೂ ವಂಚಕರ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ತನಿಖೆ ನಡೆಸಬೇಕಿದೆ. ಇಲ್ಲದಿದ್ದರೇ, ಸಮಸ್ಯೆ ಬಡ ರೈತರನ್ನ ಬಿಡುವುದಿಲ್ಲ.