Posts Slider

Karnataka Voice

Latest Kannada News

ಹುಬ್ಬಳ್ಳಿ: ಚಿಕಿತ್ಸೆ ಫಲಿಸದೇ ಮತ್ತೋರ್ವ ಮಾಲಾಧಾರಿ ಸಾವು- 5ಕ್ಕೇರಿದೆ ಮೃತರ ಸಂಖ್ಯೆ…!!!

1 min read
Spread the love

ಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಮಾಲಾಧಾರಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ ಐದಕ್ಕೇರಿದೆ.

ಧಾರವಾಡ ತಾಲೂಕಿನ ಸತ್ತೂರ ಗ್ರಾಮದ ಶಂಕರ ಚವ್ಹಾಣ ಉರ್ಫ್ ಊರ್ಬಿ ಎಂಬ 29 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾನೆ. ಕಳೆದ 13 ವರ್ಷದಿಂದ ಕಿಮ್ಸನಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಂಕರ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿದ್ದ.

ಘಟನೆಯಲ್ಲಿ ಈಗಾಗಲೇ ನಿಜಲಿಂಗಪ್ಪ ಬೇಪುರಿ ( 58 ವರ್ಷ)86%, ಸಂಜಯ್ ಸವದತ್ತಿ ( 20 ವರ್ಷ)80%, ರಾಜು ಮೂಗೇರಿ (21 ವರ್ಷ)74%, ಲಿಂಗರಾಜು ಬೀರನೂರ (24 ವರ್ಷ)86% ಸಾವಿಗೀಡಾಗಿದ್ದರು. ಇಂದು ಶಂಕರ್ ಚವ್ಹಾಣ್ (ಊರ್ಬಿ) (29 ವರ್ಷ) 99% ಮೃತರಾದರು.

ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ್ ವಾಗ್ಮೋಡೆ (22 ವರ್ಷ)70%, ಪ್ರಕಾಶ್ ಬಾರಕೇರ್ ( 42 ವರ್ಷ) 91% ಹಾಗೂ ತೇಜಸ್ವರ್ ಸಾತರೆ ( 26 ವಯಸ್ಸ) 74% ಚಿಂತಾಜನಕ ಸ್ಥಿತಿಯಲ್ಲಿದ್ದು, ವಿನಾಯಕ್ ಬಾರಕೇರ ( 12 ವರ್ಷ) 25% ಬದುಕುಳಿಯುವ ಸಾಧ್ಯತೆಯಿದೆ.

ಹುಬ್ಬಳ್ಳಿ ನಗರದಲ್ಲಿ ವರ್ಷದ ಕೊನೆಯಲ್ಲಿ ನಡೆದ ಬಹುದೊಡ್ಡ ದುರಂತ ಇದಾಗಿದೆ.


Spread the love

Leave a Reply

Your email address will not be published. Required fields are marked *