ಹುಬ್ಬಳ್ಳಿ ಹೊಸೂರ ವೃತ್ತದಲ್ಲೇ “ನಡೀತು ಪವಾಡ”….!!!
1 min readಹುಬ್ಬಳ್ಳಿ: ಹೆರಿಗೆ ನೋವಿನಿಂದ ಬಳಲುತಿದ್ದ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಂಬುಲನ್ಸ್ ನಲ್ಲಿಯೇ ಹೆರಿಗೆಯಾದ ಘಟನೆ ಹೊಸೂರ ಸರ್ಕಲ್‌ನಲ್ಲಿ ನಡೆದಿದೆ.
ಅಶ್ವಿನಿ ಸುರೇಶ್ ಪಟ್ಟಣಶೆಟ್ಟಿ ಎನ್ನುವವರೇ ಅಂಬುಲನ್ಸ್ ನಲ್ಲಿಯೇ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಅಶ್ವಿನಿ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕುಟುಂಬಸ್ಥರು 108 ಗೆ ಕರೆ ಮಾಡಿದ್ದರು.
ಸ್ವಲ್ಪ ಸಮಯದ ನಂತರ ಅಂಬುಲನ್ಸ್ ಅವರ ಮನೆ ಹತ್ತಿರ ಬಂದಿದೆ. ಗರ್ಭಿಣಿಯನ್ನ ಕರೆದುಕೊಂಡು ಹೋಗುವಾಗ ಹೆರಿಗೆ ನೋವಿನಿಂದ ಬಳಲುತಿರುವದನ್ನು ನೋಡಿ 108 ಸಿಬ್ಬಂದಿಗಳಾದ ವಿರುಪಾಕ್ಷಪ್ಪ ಮತ್ತು ಶಿವನಗೌಡ ಅವರು ರಸ್ತೆಯ ಪಕ್ಕಕ್ಕೆ ಆಂಬುಲೆನ್ಸ್ ನಿಲ್ಲಿಸಿ ಸುರಕ್ಷಿತವಾಗಿ ನಾರ್ಮಲ್ ಡೆಲಿವರಿ ಮಾಡಿಸಿದ್ದಾರೆ.
ತಾಯಿ ಮಗು ಇಬ್ಬರು ಆರೋಗ್ಯದಿಂದ ಇದ್ದಾರೆ. ಇದರಿಂದ ಕುಟುಂಬಸ್ಥರು 108 ಆಂಬುಲೆನ್ಸ್ ಸೇವಾ ಕಾರ್ಯಕ್ಯೆ ಮತ್ತು 108 ಸಿಬ್ಬಂದಿಗಳಾದ ವಿರುಪಾಕ್ಷಪ್ಪ ಮತ್ತು ಶಿವನಗೌಡಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ತಾಯಿ ಮತ್ತು ಮಗುವನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದರು.